ಮಣಿಪಾಲ: ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ನ ವಿದ್ಯಾರ್ಥಿಗಳು ತಮ್ಮ ದೃಶ್ಯ ಕಲೆಗಳ ಅಧ್ಯಯನದ ಭಾಗವಾಗಿ ಮೂಡುಬಿದಿರೆ ಮತ್ತು ಮಂಗಳೂರಿನಲ್ಲಿರುವ ಐತಿಹಾಸಿಕ ಮತ್ತು ಕಲಾತ್ಮಕ ಮಹತ್ವವನ್ನು ಹೊಂದಿದ ಅನೇಕ ಸ್ಥಳಗಳಿಗೆ ಭೇಟಿ ನೀಡಿದರು. ಈ ಪ್ರದೇಶದ ಭಿತ್ತಿಚಿತ್ರಗಳನ್ನು ಅಧ್ಯಯನ ಮಾಡಲು ಅವರು ಸಾವಿರ ಕಂಬದ ಬಸದಿ, ಪ್ರಾಚೀನ ಜೈನ ಮಠ ಮತ್ತು ಸೇಂಟ್ ಅಲೋಶಿಯಸ್ ಚಾಪೆಲ್‌ಗೆ ಭೇಟಿ ನೀಡಿದರು.
ಜೈನ ಮಠಾಧೀಶರಾದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರಯವರಿಯ ಸ್ವಾಮೀಜಿ ಅವರೊಂದಿಗೆ ಸಂವಾದ ನಡೆಸಿದ ಅವರು ತದನಂತರ INTACH ಮತ್ತು ಆರ್ಟ್ ಕೆನರಾ, ಮಂಗಳೂರಿನ ವತಿಯಿಂದ ಆಯೋಜಿಸಲಾದ ಅಂತರಾಷ್ಟ್ರೀಯ ಕವಿತಾ ದಿನಾಚರಣೆಯಲ್ಲಿ ಭಾಗವಹಿಸಿದರು.
ಈ ಭೇಟಿಯನ್ನು ಕಲಾ-ಸಂಶೋಧಕ ಡಾ ಜನಾರ್ದನ ರಾವ್ ಹಾವಂಜೆ, ಪ್ರೊ ನೇಮಿರಾಜ್ ಶೆಟ್ಟಿ ಸಂಯೋಜಿಸಿದರು ಮತ್ತು ಇದು ಜಿಸಿಪಿಎಎಸ್ ಮುಖ್ಯಸ್ಥ ಪ್ರೊ ವರದೇಶ್ ಹಿರೇಗಂಗೆಯವರ ಮಾರ್ಗದರ್ಶನದಲ್ಲಿ ನಡೆಯಿತು.