ನಿರಾಮಯ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ ನರ್ಸಿಂಗ್ ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ

ಉಡುಪಿ: ಶ್ರೀ ಸೋದೆ ವಾದಿರಾಜ ಮಠದ ಆಡಳಿತಕ್ಕೊಳಪಟ್ಟ ಬಂಟಕಲ್ಲು ನಿರಾಮಯ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಥಮ ಬ್ಯಾಚಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸುವ ಕಾರ್ಯಕ್ರಮ ಮಾರ್ಚ್21 ರಂದು ನಿರಾಮಯ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನ ಸಭಾಂಗಣದಲ್ಲಿ ನಡೆಯಿತು.

ಡಾ. ಎನ್. ಆರ್. ಆಚಾರ್ಯ ಮೆಮೋರಿಯಲ್ ಹಾಸ್ಪಿಟಲ್ ನ ಮೆಡಿಕಲ್ ಡೈರೆಕ್ಟರ್ ಡಾ. ಭಾಸ್ಕರ್ ಆಚಾರ್ಯ
ಕೋಟೇಶ್ವರ್ ಮಾತನಾಡಿ, ಫ್ಲಾರೆನ್ಸ್ ನೈಟಿಂಗೇಲರ ಜೀವನ ಚರಿತ್ರೆ ಮತ್ತು ಆರೋಗ್ಯ ವಿಜ್ಞಾನದಲ್ಲಿ ನರ್ಸಿಂಗ್‌ನ
ಮಹತ್ವವನ್ನು ತಿಳಿಸಿದರು.

ರಿಸರ್ಚ್ ಆಂಡ್ ಕೊಲ್ಯಾಬರೇಶನ್ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ನ ಪ್ರೋಫೆಸರ್ ಆಂಡ್ ಹೆಡ್ ಡಾ. ಆನೀಸ್ ಜೋರ್ಜ್ ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿಗಳು ರೋಗಿಗಳ ಆರೈಕೆಯನ್ನು ತಮ್ಮ ಧ್ಯೇಯವಾಗಿ ಬಳಸಿ ಸೇವೆ ಸಲ್ಲಿಸಬೇಕು ಹಾಗೂ ರೋಗಿಗಳೊಂದಿಗೆ ಹೇಗೆ ಸಂವಾದ ನಡೆಸಬೇಕು ಎಂಬುವುದನ್ನು ವಿವರಿಸಿದರು.

ಎಸ್. ವಿ. ಎಚ್. ಎಜುಕೇಶನ್ ಸೊಸೈಟಿ, ಉಡುಪಿಯ ಕಾರ್ಯದರ್ಶಿ ರತ್ನಕುಮಾರ್‌ ಮಾತನಾಡಿ ಬಂಟಕಲ್ಲಿನಲ್ಲಿ ನರ್ಸಿಂಗ್ ಕಾಲೇಜಿನ ಅವಶ್ಯಕತೆಯನ್ನು ಮನಗಂಡು ಕಾಲೇಜನ್ನು ಪ್ರಾರಂಭಿಸಿದ್ದನ್ನು ತಿಳಿಸಿದರು.

ನಿರಾಮಯ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನ ನಿರ್ದೇಶಕ ಡಾ. ನವೀನ್ ಎಂ. ಬಳ್ಳಾಲ್ ಉಪಸ್ಥಿತರಿದ್ದರು.

ಪ್ರಾಂಶುಪಾಲೆ ಡಾ. ಫ್ಲಾವಿಯ ಕ್ಯಾಸ್ಟಲಿನೋ ಸ್ವಾಗತಿಸಿ ಫ್ಲಾರೆನ್ಸ್ ನೈಟಿಂಗೇಲ್ ಪ್ರತಿಜ್ಞಾ ವಿಧಿ ಬೋಧಿಸಿದರು. ಜೆನಿಫರ್ ಮಥಾಯಸ್‌ ವಂದಿಸಿದರು. ದಿವ್ಯಾ.ವಿ ನಿರೂಪಿಸಿದರು.

ವಿದ್ಯಾರ್ಥಿಗಳ ಪೋಷಕರು, ಕಾಲೇಜಿನ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.