ಬ್ರಹ್ಮಾವರ: ಶನಿವಾರದಂದು ಇಲ್ಲಿನ ವಿದ್ಯಾಲಕ್ಷ್ಮೀ ಸಮೂಹ ಸಂಸ್ಥೆಯಲ್ಲಿ ಕಾಲೇಜಿನ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಫ್ರೆಷರ್ಸ್ ಡೇ ಅನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಜನತಾ ಪ.ಪೂ ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ್, ಬ್ರಹ್ಮಾವ ಪೊಲೀಸ್ ಠಾಣೆಯ ಪಿ.ಎಸ್.ಐ ರಾಜಶೇಖರ್ ವಂಡಳ್ಳಿ ಇವರು ಭಾಗವಹಿಸಿದ್ದರು.
ಕಾಲೇಜಿನ ಸಂಸ್ಥಾಪಕ ಸುಬ್ರಹ್ಮಣ್ಯ ಇವರು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಶುಭ ಹಾರೈಸಿದರು.
ಕಾಲೇಜಿನ ನಿರ್ದೇಶಕಿ ಶ್ರೀಮತಿ ಮಮತಾ, ಪ್ರಾಂಶುಪಾಲೆ ಶ್ರೀಮತಿ ಡಾ.ಸೀಮಾ ಭಟ್, ಅಧ್ಯಾಪಕ ವೃಂದದವರು ಮತ್ತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕಿಯರಾದ ಸ್ವಾತಿ ನಿರೂಪಿಸಿ, ಮಧುಮಿತ ಸ್ವಾಗತಿಸಿ, ಸವಿತಾ ವಂದಿಸಿದರು.