ಉಡುಪಿ: ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿ ನಂತರ ಮುಂದೇನು ಎನ್ನುವ ಆಲೋಚನೆಯಲ್ಲಿರುವ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಗಾರವೊಂದನ್ನು ಏರ್ಪಡಿಸಿಲಾಗಿದೆ. ನ.19 ರಂದು ಮಧ್ಯಾಹ್ನ 2:15 ರಿಂದ ಸಂಜೆ 4:30 ರವರೆಗೆ ಉಡುಪಿಯ ಕಿದಿಯೂರು ಹೊಟೇಲಿನ ಅನಂತಶಯನ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಉಡುಪಿಯ ತ್ರಿಶಾ ಕ್ಲಾಸ್ಸಸ್ ಸಂಸ್ಥೆಯು ನೆರವೇರಿಸಿ ಕೊಡಲಿದೆ.
ವಾಣಿಜ್ಯ ಕ್ಷೇತ್ರದಲ್ಲಿ ಇರುವ ವಿವಿಧ ಕೋರ್ಸ್ ಗಳು ಮತ್ತು ಪದವಿಗಳ ಸರಿಯಾದ ಸಂಯೋಜನೆಯ ಕುರಿತು ಮಾರ್ಗದರ್ಶನ ನೀಡುವ ಉದ್ದೇಶ ಈ ಕಾರ್ಯಗಾರದ್ದಾಗಿದೆ. ಸಿ.ಎ, ಸಿ.ಎಂ.ಎ ಮತ್ತು ಎಂ.ಬಿ.ಎ ಪದವೀಧರರಾದ, ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಎನ್ ಎಸ್ ಗೋಪಾಲಕೃಷ್ಣ ಭಟ್ ಅವರ ನೇತೃತ್ವದಲ್ಲಿ ಕಾಮರ್ಸ್ – ದ ವಲ್ಡ್ ಆಫ್ ಎಂಡ್ ಲೆಸ್ ಅಪಾರ್ಚ್ಯುನಿಟೀಸ್ ಎನ್ನುವ ವಿಷಯದ ಮೇಲೆ ಕಾರ್ಯಗಾರವು ನಡೆಯಲಿದೆ.
ಕಾರ್ಯಗಾರದ ಪ್ರಮುಖಾಂಶಗಳು:
☑️ ವೃತ್ತಿಪರ ಕೋರ್ಸುಗಳ ಬಗ್ಗೆ ಮಾಹಿತಿ
☑️ ವಾಣಿಜ್ಯ ಮತ್ತು ತಂತ್ರಜ್ಞಾನದ ಬಗ್ಗೆ ಮಾಹಿತಿ
☑️ ವಾಣಿಜ್ಯ ಕ್ಷೇತ್ರದಲ್ಲಿ ಇತ್ತೀಚೆಗಿನ ಪ್ರವೃತ್ತಿಗಳು
☑️ ಪ್ರಶ್ನೋತ್ತರಗಳ ಅಧಿವೇಶನ
☑️ ಉಚಿತ ಆನ್ ಲೈನ್ ತರಗತಿಗಳ ಬೆಂಬಲ
☑️ ಉಚಿತ ವೃತ್ತಿಜೀವನ ಮಾರ್ಗದರ್ಶನದ ಕೈಪಿಡಿ
☑️ ಉಚಿತ ದ್ವಿತೀಯ ಪಿಯುಸಿ ಅಕೌಂಟೆನ್ಸಿ ಥಿಯರಿ ಕೈಪಿಡಿ
ಈ ಕಾರ್ಯಗಾರದಲ್ಲಿ ಪಾಲ್ಗೊಳ್ಳಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ, ಆಸಕ್ತ ವಿದ್ಯಾರ್ಥಿಗಳು ಈ https://tinyurl.com/2seminar ಲಿಂಕ್ ಅನ್ನು ಉಪಯೋಗಿಸಿ ನೋಂದಣಿ ಮಾಡಿಕೊಳ್ಳಬಹುದು ಅಥವಾ ಉಡುಪಿಯ ಅನಂತ ಟವರ್ಸ್ ನಲ್ಲಿರುವ ತ್ರಿಶಾ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಬಹುದು.