ಸಾಲಿಗ್ರಾಮ ಪ.ಪಂಚಾಯತ್ : ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ ಮತದಾನ ಕೇಂದ್ರಕ್ಕೆ ತೆರಳಲು ಉಚಿತ ವಾಹನ ವ್ಯವಸ್ಥೆ

ಉಡುಪಿ: ಉಡುಪಿ-ಚಿಕ್ಕಮಗಳೂರು ಸಾರ್ವತ್ರಿಕ ಲೋಕಸಭಾ ಚುನಾವಣೆ -2024 ಕ್ಕೆ ಸಂಬಂಧಿಸಿ ಏಪ್ರಿಲ್
26 ರಂದು ಮತದಾನ ನಡೆಯಲಿರುವ ಹಿನ್ನೆಲೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿಶೇಷ ಚೇತನರು, ಅಶಕ್ತರು ಮತ್ತು ಹಿರಿಯ ನಾಗರೀಕರು (75 ವರ್ಷ ಮೇಲ್ಪಟ್ಟವರಿಗೆ) ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ಅನುಕೂಲವಾಗುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಉಚಿತ ವಾಹನ ವ್ಯವಸ್ಥೆ ಕಲಿಸಲಾಗಿದ್ದು, ಈ ಬಗ್ಗೆ ವಾಹನ ಸೌಲಭ್ಯ ಪಡೆಯಲು ಮೊಬೈಲ್ ಸಂಖ್ಯೆ:
9845436753 ಮತ್ತು 9902460052 ಅನ್ನು ಸಂಪರ್ಕಿಸಿ, ಸದ್ರಿ ವಾಹನ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.