ಮಂಗಳೂರು: ಕೌಶಲ್ಯ ಭಾರತದಡಿ ಐಐಟಿ ಕಂಪನಿಗಳಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತು ಡ್ರೋನ್ ತಂತ್ರಜ್ಞಾನದ ಬಗ್ಗೆ ಉಚಿತ ತರಬೇತಿ

ಮಂಗಳೂರು: ಭಾರತದ ಪ್ರತಿಷ್ಠಿತ ಸಂಸ್ಥೆ IIT Mandi iHub (Indian Institute of technology) ಮತ್ತು HCI ಫೌಂಡೇಶನ್ ವತಿಯಿಂದ ಹೆಚ್ಚಿನ ಬೇಡಿಕೆಯ AI (Artificial Intelligence) ಮತ್ತು ಡ್ರೋನ್ ತಂತ್ರಜ್ಞಾನ(Drone technologies)ದಲ್ಲಿ 3 ತಿಂಗಳ ಉಚಿತ ತರಬೇತಿ ಮತ್ತು ಉದ್ಯೋಗಾವಕಾಶ ನೀಡಲಾಗುವುದು.

ಈ ವಿಷಯಕ್ಕೆ ಸಂಬಂಧಿಸಿದಂತೆ, ಕೌಶಲ್ಯ ಭಾರತ(Skill India mission) ಅಡಿಯಲ್ಲಿIIT Mandi iHub ಮತ್ತು HCI ಫೌಂಡೇಶನ್ ಜಂಟಿಯಾಗಿ ಭಾರತದ ವಿವಿಧ ಭಾಗಗಳಿಂದ ಸುಮಾರು 1000-2000 ಯುವಕ / ಯುವತಿಯರಿಗೆ, ಉಚಿತವಾಗಿ IoT (ಇಂಟರ್ನೆಟ್ ಆಫ್ ಥಿಂಗ್ಸ್), AI/ML (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್/ಮಷಿನ್ ಲರ್ನಿಂಗ್) ವಿಭಾಗಕ್ಕೆ ತರಬೇತಿ ನೀಡಿ ಉದ್ಯೋಗದ ಮಾಹಿತಿ ಮತ್ತು ಉದ್ಯೋಗವನ್ನು ಕಲ್ಪಿಸಿಕೊಡುವ ಕಾರ್ಯ ಮಾಡಲಿದೆ.

ಸಮಗ್ರ ತರಬೇತಿ ಕಾರ್ಯಕ್ರಮಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ನ. 20 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ವಿದ್ಯಾರ್ಹತೆ :- ಎಂಜಿನಿಯರಿಂಗ್ ಅಥವಾ ವಿಜ್ಞಾನ ಕ್ಷೇತ್ರದಲ್ಲಿ 3 ಅಥವಾ 4 ವರ್ಷಗಳ ಪದವಿಪೂರ್ವ (UG) ಕಾರ್ಯಕ್ರಮದ (UG ಡಿಪ್ಲೊಮಾ) 2 ನೇ ವರ್ಷವನ್ನು ಪೂರ್ಣಗೊಳಿಸಿರಬೇಕು ಅಥವಾ ಡಿಪ್ಲೊಮಾ ಕಾರ್ಯಕ್ರಮದ 2 ನೇ ವರ್ಷವನ್ನು ಪೂರ್ಣಗೊಳಿಸಿ (12 ನೇ ತರಗತಿಯ ನಂತರ), BE ಮತ್ತು ಪದವಿ ಪಡೆದಿರಬೇಕು.

ತರಬೇತಿಯ ಸ್ಥಳ: ಮಂಗಳೂರು

ಈ ಲಿಂಕ್ ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ:
https://forms.gle/gykr465SVCM8bqtk9

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ವಿಶೇಷ ಮೀಸಲಾತಿ ಇದೆ. ತರಬೇತಿಗೆ ಯಾವುದೇ ತರಹದ ಶುಲ್ಕಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8151828114,7483914584, 8618887471