ಬ್ರಹ್ಮಾವರ: ಸ್ವ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕೆ ಅನುಕರಣೀಯ ಮಾದರಿ ಎಂದು ಗುರುತಿಸಲ್ಪಟ್ಟ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ನಡೆಯುವ ರುಡ್ ಸೆಟ್ ಸಂಸ್ಥೆಯು ಬ್ರಹ್ಮಾವರದಲ್ಲಿ ಉಚಿತ ಊಟ, ವಸ್ತಿ, ಸಮವಸ್ತ್ರ ತರಬೇತಿ ಕಿಟ್ ನೊಂದಿದೆ ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ 10 ದಿನಗಳ ಕ್ಯಾಂಡಲ್ ತಯಾರಿಕೆ, ಫಿನಾಯಿಲ್ ಸೋಪ್ ಆಯಿಲ್ ತರಾರಿಕೆ ತರಬೇತಿಗಳನ್ನು ನ.21 ರಿಂದ 30 ರವರೆಗೆ ಆಯೋಜಿಸಿದ್ದು, ತರಬೇತಿ ಪಡೆಯಲಿಚ್ಚಿಸುವ ಗ್ರಾಮೀಣ ಭಾಗದ ಅಕ್ಷರಸ್ಥ 18-45 ವರ್ಷದೊಳಗಿನವರು ತಮ್ಮ ಹೆಸರು ವಿಳಾಸ ಮೊಬೈಲ್ ನಂಬರ್ ರೇಶನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು 9632561145, 9591233748, 9611544930, 9448348569, 9844086383, 8861325564 ಈ ಸಂಖ್ಯೆಗಳಿಗೆ ಕಳುಹಿಸಬಹುದು ಅಥವಾ [email protected] ಗೆ ಇ-ಮೇಲ್ ಮಾಡಬಹುದು.