ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಮತ್ತು ಕಡಿಯಾಳಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಇವರ ನೇತೃತ್ವದಲ್ಲಿ ಮೇ 11ರಂದು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದ ಆವರಣದಲ್ಲಿ ಸಾಮೂಹಿಕ ಉಪನಯ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉಚಿತ ಉಪನಯನ ಸಂಸ್ಕಾರ ಬಯಸುವ ವಟುಗಳ ಪೋಷಕರು 9008190489 ಈ ಸಂಖ್ಯೆಗೆ ಸಂಪರ್ಕಿಸಬಹುದು. ಈ ಬ್ರಹ್ಮೋಪದೇಶಕ್ಕೆ ತಗಲುವ ಎಲ್ಲಾ ವೆಚ್ಚವು ಸಂಪೂರ್ಣ ಉಚಿತವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ರಾಘವೇಂದ್ರ ಕಿಣಿಯವರ ದ್ವಿತೀಯ ಮಗನಾದ ರಚಿತ್ ಕಿಣಿಗೂ ಉಪನಯನ ನಡೆಯಲಿದ್ದು ಅರ್ಹ ಬಡ ವಟುಗಳಿಗೆ ಅವಕಾಶವಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.