ಬ್ರಹ್ಮಾವರ: ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಅಣಬೆ ಬೇಸಾಯ ತರಬೇತಿ

ಬ್ರಹ್ಮಾವರ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕೆನರಾ ಬ್ಯಾಂಕ್ ನ ಸಹಯೋಗದೊಂದಿಗೆ ನಡೆಯುತ್ತಿರುವ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಊಟ, ವಸತಿ, ಸಮವಸ್ತ್ರ , ತರಬೇತಿ ಕಿಟ್ ನೊಂದಿಗೆ ಸಂಪೂರ್ಣ ಉಚಿತ ಅಣಬೆ ಬೇಸಾಯ ತರಬೇತಿ ಯುವಕ-ಯುವತಿಯರಿಗೆ ಪುರುಷ ಮತ್ತು ಮಹಿಳೆಯರಿಗೆ ಡಿ. 26 ರಿಂದ ಜನವರಿ 04 ವರೆಗೆ 10 ದಿನಗಳ ಕಾಲ ನಡೆಯಲಿದೆ. ಹೆಚ್ಚು ಬೇಡಿಕೆ ಇರುವ ಹಾಗೂ ಜೌಷಧೀಯ ಗುಣ ಹೊಂದಿರುವ ಅಣಬೆ ಕೃಷಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ‌ ಮಾರುಕಟ್ಟೆ ದೊರೆಯಲಿದೆ.

ಈ ತರಬೇತಿಯಲ್ಲಿ ಅಣಬೆ ಬೇಸಾಯ ಮಾಡಿ ಅದರ ವ್ಯವಹಾರ ನಡೆಸಲು‌ ಬೇಕಾದ ಮಾರುಕಟ್ಟೆ, ಬ್ಯಾಂಕಿನ ವ್ಯವಹಾರ , ಸರಕಾರಿ ಯೋಜನೆ, ಯೋಜನಾ ವರದಿ ತಯಾರಿಕೆ, ಸಮಯ ನಿರ್ವಹಣೆ, ಸಂವಹನ ಕೌಶಲ್ಯ, ಸಮಸ್ಯೆ ಬಗೆಹರಿಸುವ ಬಗ್ಗೆ, ಅವಲಂಬನೆ ಇಲ್ಲದೆ ವ್ಯವಹಾರಿಸುವ ಬಗ್ಗೆ, ರಿಸ್ಕ್ ತೆಗೆದುಕೊಳ್ಳವ ರೀತಿಗಳ ಬಗ್ಗೆ, ಗುಣಮಟ್ಟದ ನಿರ್ವಹಣೆ ಮುಂತಾದ ವಿಷಯಗಳ ಕುರಿತು ವಿಶೇಷವಾದ ತರಬೇತಿ ನೀಡಲಾಗುವುದು.

ಅರ್ಹತೆ:

ಈ ತರಬೇತಿ ಪಡೆಯಲು ಬಯಸುವವರು ಗ್ರಾಮೀಣ ಭಾಗದ 18 ರಿಂದ 45 ವರ್ಷದ ಒಳಗಿನವರು, ಬಿ.ಪಿ.ಎಲ್ ಕುಟುಂಬದ ಸದಸ್ಯರಾಗಿ ಇರಬೇಕು, ಕನ್ನಡ ಓದಲು ಬರೆಯಲು ಬರುವ, ಮುಂದೇ ಇದನ್ನೇ ವೃತ್ತಿಯನ್ನಾಗಿ ಮಾಡಲು ಇಚ್ಚಿಸುವವರು ತಮ್ಮ ಹೆಸರು, ವಿಳಾಸ, ಮೊಬೈಲ್ ನಂ. ಜನ್ಮ ದಿನಾಂಕ ಬರೆದು ಪಡೆಯಲು ಇಚ್ಚಿಸುವ ತರಬೇತಿಯ ಯಾವುದೆಂದು ಬರೆದು, ತಮ್ಮ ಹೆಸರಿರುವ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇರಿಸಿ ತಕ್ಷಣ ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ-576213 ಉಡುಪಿ ಜಿಲ್ಲೆ ಈ ವಿಳಾಸಕ್ಕೆ ಸಲ್ಲಿಸಬಹುದು ಅಥವಾ ವಾಟ್ಸಪ್ ನಂ. 9632561145 ಗೆ ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.