ಜನವರಿ 12 ರಂದು ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಉಚಿತ ಮಾಸಿಕ ಉನ್ನತಿ ಉದ್ಯೋಗ ಮೇಳಕ್ಕೆ ಚಾಲನೆ

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಹಾಗೂ ಉದ್ಯೋಗಾಧಾರಿತ ತರಬೇತಿಗಳಿಗೆ ಪ್ರಸಿದ್ಧಿ ಪಡೆದಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಜಿಲ್ಲೆಯ ಹಾಗೂ ರಾಜ್ಯದ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗವಕಾಶವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಇದೀಗ ಜನವರಿ 12ರ “ರಾಷ್ಟ್ರೀಯ ಯುವ ದಿವಸ”ದ ಅಂಗವಾಗಿ ಜನವರಿ 2023ರಿಂದ ಜನವರಿ 2024ರ ವರೆಗೆ ಉಚಿತ ಮಾಸಿಕ “ಉನ್ನತಿ ಉದ್ಯೋಗ ಮೇಳ”ಗಳನ್ನು ಆಯೋಜಿಸಲಿದೆ. ಈ ಮೇಳವು ಪ್ರತಿ ತಿಂಗಳ ಎರಡನೇ ಗುರುವಾರದಂದು ಸಂಸ್ಥೆಯ ಕಚೇರಿಯಲ್ಲಿ ನೇರ ಸಂದರ್ಶನ ಅಥವಾ ಆನ್ ಲೈನ್ ಸಂದರ್ಶನದ ಮೂಲಕ ನಡೆಯಲಿದೆ.

ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು ಅಥವಾ ಉದ್ಯೋಗದಾತರು www.unnathijobs.com ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯ ಹಾಗೂ ಇನ್ನಿತರ ದೇಶ-ವಿದೇಶಗಳ ಐಟಿ, ಬ್ಯಾಂಕಿಂಗ್, ಹಾಸ್ಪಿಟಲಿಟಿ, ಟೂರಿಸಮ್, ಮ್ಯಾನುಫ್ಯಾಕ್ಚರಿಂಗ್, ರೀಟೇಲ್ ಕ್ಷೇತ್ರದ ಪ್ರತಿಷ್ಠಿತ ಕಂಪೆನಿಗಳು ಈ ಮೇಳಗಳಲ್ಲಿ ಭಾಗವಹಿಸಲಿದ್ದು, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ, ಇಂಜಿನೀಯರಿಂಗ್, ಎಂಬಿಎ ಮುಗಿಸಿರುವ ಅಭ್ಯರ್ಥಿಗಳಿಗೆ ನಿಶುಲ್ಕವಾಗಿ ನೇಮಕಾತಿ ಪಡೆಯುವ ಅವಕಾಶವನ್ನು ಸಂಸ್ಥೆಯು ಒದಗಿಸುತ್ತಿದೆ.ನೋಂದಣಿ ಮಾಡಿರುವ ಅಭ್ಯರ್ಥಿಗಳಿಗೆ ಸಂಸ್ಥೆಯು ಸಂದರ್ಶನ ಎದುರಿಸುವ ಬಗ್ಗೆ ಒಂದು ದಿನದ ಉಚಿತ ತರಬೇತಿಯನ್ನೂ ನೀಡಲಿದ್ದು, ಹೆಚ್ಚಿನ ಮಾಹಿತಿಗಾಗಿ 8762803324 ಗೆ ಕರೆ ಮಾಡಿ ಅಥವಾ ಪಿಪಿಸಿ 1ನೇ ಅಡ್ಡರಸ್ತೆಯಲ್ಲಿರುವ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಲು ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.