ರಾಷ್ಟ್ರೀಯ ಯುವ ದಿವಸದ ಅಂಗವಾಗಿ ಉನ್ನತಿ ಉಚಿತ ಮಾಸಿಕ ಉದ್ಯೋಗ ಮೇಳ

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಹಾಗೂ ಉದ್ಯೋಗಾಧಾರಿತ ತರಬೇತಿಗಳಿಗೆ ಪ್ರಸಿದ್ಧಿ ಪಡೆದಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಈಗಾಗಲೇ 3000ಕ್ಕೂ ಅಧಿಕ ಯುವಕ-ಯುವತಿಯರಿಗೆ ಉದ್ಯೋಗವಕಾಶವನ್ನು ಸೃಷ್ಟಿಸಿದೆ. ಇದೀಗ ಜನವರಿ 12ರ “ರಾಷ್ಟ್ರೀಯ ಯುವ ದಿವಸ”ದ ಅಂಗವಾಗಿ ಸಂಸ್ಥೆಯು ಜನವರಿ 2023ರಿಂದ ಜನವರಿ 2024ರ ವರೆಗೆ “ಉಚಿತ ಮಾಸಿಕ ಉದ್ಯೋಗ ಮೇಳ”ಗಳನ್ನು ಸಂಸ್ಥೆಯ ಕಚೇರಿಯಲ್ಲಿ ಪ್ರಾರಂಭಿಸಲಿದೆ. ಈ ಮೇಳಗಳಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು ಅಥವಾ ಉದ್ಯೋಗದಾತರು www.unnathijobs.com ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಂಡು ಪ್ರತಿ ತಿಂಗಳ ಎರಡನೇ ವಾರ ನಡೆಯುವ ಉದ್ಯೋಗ ಮೇಳಗಳಲ್ಲಿ ಭಾಗವಹಿಸಬಹುದು.ಈ ಮೇಳಗಳಲ್ಲಿ ಸ್ಥಳೀಯ ಹಾಗೂ ಇನ್ನಿತರ ದೇಶ-ವಿದೇಶಗಳ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿದ್ದು,ನೇರ ನೇಮಕಾತಿ ಅಥವಾ ಆನ್ ಲೈನ್ ಸಂದರ್ಶನದ ಮೂಲಕ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ. ನೋಂದಣಿ ಮಾಡಿರುವ ಅಭ್ಯರ್ಥಿಗಳಿಗೆ ಸಂಸ್ಥೆಯು ಸಂದರ್ಶನ ಎದುರಿಸುವ ಬಗ್ಗೆ ಒಂದು ದಿನದ ಉಚಿತ ತರಬೇತಿಯನ್ನೂ ನೀಡಲಿದ್ದು, ಹೆಚ್ಚಿನ ಮಾಹಿತಿಗಾಗಿ 8762803324 ಗೆ ಕರೆ ಮಾಡಿ ಅಥವಾ ಪಿಪಿಸಿ 1ನೇ ಅಡ್ಡರಸ್ತೆಯಲ್ಲಿರುವ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.