ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಪ್ರಿವೆನ್ಟೀವ್ ಹೆಲ್ತ್ ಕೇರ್ ಟ್ರೈನಿಂಗ್ ಅಂಡ್ ಚೆಕ್‌ಅಪ್ ಯೋಜನೆಯಡಿ, ಜಿಲ್ಲೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರದ ವೇಳಾಪಟ್ಟಿ ಹೀಗಿದೆ:

ಮಾ.21 ರಂದು ಗೋಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಪಾಡಿ, ಬೀಜಾಡಿ, ಕುಂಬಾಶಿ, ತೆಕ್ಕೆಟ್ಟೆ ಹಾಗೂ ಸುತ್ತಮುತ್ತಲಿನವರಿಗೆ, ಮಾ.22 ರಂದು ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆದೂರು, ಕೋರ್ಗಿ, ಬೇಳೂರು ಹಾಗೂ ಸುತ್ತಮುತ್ತಲಿನವರಿಗೆ, ಮಾ.23 ರಂದು ಸಿದ್ಧಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿದ್ದಾಪುರ, ಕಮಲಶಿಲೆ, ಆಜ್ರಿ ಹಾಗೂ ಸುತ್ತಮುತ್ತಲಿನವರಿಗೆ, ಮಾ.24 ರಂದು ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಂಗಡಿ, ಯಡಮೊಗೆ ಹಾಗೂ ಸುತ್ತಮುತ್ತಲಿನವರಿಗೆ, ಮಾ.25 ರಂದು ಶಂಕರನಾರಾಯಣ ವಿ.ಎಸ್.ಆಚಾರ್ಯ ರಂಗಮಂದಿರದಲ್ಲಿ ಉಳ್ಳೂರು 74, ಶಂಕರನಾಯಣ ಹಾಗೂ ಸುತ್ತಮುತ್ತಲಿನವರಿಗೆ, ಮಾ.26 ರಂದು ಅಂಪಾರು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಕಾವ್ರಾಡಿ, ಅಂಪಾರು ಹಾಗೂ ಸುತ್ತಮುತ್ತಲಿನವರಿಗೆ, ಮಾ. 27 ರಂದು ಬಸ್ರೂರು ನಿವೇದಿತಾ ಪ್ರೌಢಶಾಲೆಯಲ್ಲಿ ಬಸ್ರೂರು, ಕಂದಾವರ, ಬಳ್ಕೂರು, ಜಪ್ತಿ, ಆನಗಳ್ಳಿ, ಹಾಗೂ ಸುತ್ತಮುತ್ತಲಿನವರಿಗೆ, ಮಾ. 30 ರಂದು ಗುಜ್ಜಾಡಿ ನಾಯಕವಾಡಿ ರಾಮಮಂದಿರದಲ್ಲಿ ತ್ರಾಸಿ, ಗಂಗೊಳ್ಳಿ, ಗುಜ್ಜಾಡಿ ಹಾಗೂ ಸುತ್ತಮುತ್ತಲಿನವರಿಗೆ ಹಾಗೂ ಮಾ. 31 ರಂದು ಹೊಸಾಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಹಟ್ಟಿಯಂಗಡಿ, ಹೊಸಾಡು ಹಾಗೂ ಸುತ್ತಮುತ್ತಲಿನ ಪ್ರದೇಶದ ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವಲಂಬಿತರಿಗೆ ಬೆಳಗ್ಗೆ 10.30 ರಿಂದ ಸಂಜೆ 6 ಗಂಟೆವರೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

18 ರಿಂದ 60 ವರ್ಷದೊಳಗಿನ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರು, ಕಟ್ಟಡ ಕಾರ್ಮಿಕ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ, ಆಧಾರ್ ಗುರುತಿನ ಚೀಟಿಯ ಜೆರಾಕ್ಸ್ ಹಾಗೂ ರೇಷನ್ ಕಾರ್ಡ್ನ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.