ಬೈಂದೂರು: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಬೈಂದೂರು ತಾಲ್ಲೂಕು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು ಸಹಯೋಗದೊಂದಿಗೆ ಬೈಂದೂರಿನಲ್ಲಿ ನಿವೃತ್ತ ನೌಕರರಿಗೆ ರಕ್ತ ತಪಾಸಣೆ ಮತ್ತು ಗುಂಪು ವರ್ಗೀಕರಣ, ಸಿಹಿಮೂತ್ರ ತಪಾಸಣೆ, ರಕ್ತದೊತ್ತಡ ತಪಾಸಣೆ, ಮತ್ತಿತರ ರೋಗ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಮತ್ತು ಆರೋಗ್ಯ ಸಲಹೆ ನೀಡಲಾಯಿತು.
ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ನಿವೃತ್ತ ನೌಕರರು ತಮ್ಮ ಆರೋಗ್ಯಕದ ಕಡೆಗೆ ಲಕ್ಷವಿಡಬೇಕು ಎಂದು ಸಲಹೆ ನೀಡಿದರು.
ನೌಕರರ ಸಂಘದ ಅಧ್ಯಕ್ಷ ಐ.ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಂಜು ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಗೋವಿಂದ ಬಿಲ್ಲವ ನಿರೂಪಿಸಿದರು.
ಸಂಘದ ಪದಾಧಿಕಾರಿಗಳು, ಸದಸ್ಯರು ವೈದ್ಯಕೀಯ ತಪಾಸಣೆಗೆ ಒಳಗಾದರು.
ಪದಾಧಿಕಾರಿಗಳಾದ ರಾಜಾರಾಮ ಭಟ್,ಭಾಸ್ಕರ ಪ್ರಭು, ವೆಂಕಟರಮಣ, ಚಂದ್ರಶೇಖರ ಭಟ್, ದೇವಪ್ಪ, ರಾಮ ಶೇರುಗಾರ್ ಸಹಕರಿಸಿದರು.