ಕೊಡವೂರು: ಆ. 12ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಕೊಡವೂರು: ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಯುವಕ ಸಂಘ (ರಿ.) ಕೊಡವೂರು, ಸ್ವಾವಲಂಬಿ ಭಾರತ, ಉಡುಪಿ ನೇತ್ರ ತಪಾಸಣಾ ವಿಭಾಗ ಪ್ರಸಾದ್ ನೇತ್ರಾಲಯ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಸಮುದಾಯ ದಂತ ವೈದ್ಯಕೀಯ ವಿಭಾಗ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಉಡುಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಉಪ ಕೇಂದ್ರ ಕೊಡವೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ತಂಬಾಕು ನಿಯಂತ್ರಣ ಘಟಕ ಹಾಗೂ ಆಸಾಂಕ್ರಮಿಕ ರೋಗ ನಿಯಂತ್ರಣ ಘಟಕ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಆ. 12ರಂದು ಕೊಡವೂರಿನ ವಿಪ್ರ ಶ್ರೀ ಸಭಾಭವನದಲ್ಲಿ ಮಧ್ಯಾಹ್ನ 1:30ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ದಂತ ಚಿಕಿತ್ಸೆ , ಕಣ್ಣಿನ ತಪಾಸಣೆ, ಮಧುಮೇಹ , ರಕ್ತದೊತ್ತಡ , ಬಿ ಪಿ ಶುಗರ್ ತಪಾಸಣೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕ ನಗರಸಭಾ ಸದಸ್ಯ ವಿಜಯ್ ಕೊಡವೂರು ತಿಳಿಸಿದ್ದಾರೆ.

ತಪಾಸಣೆಗೆ ಬರುವವರು ತರಬೇಕಾದ ದಾಖಲೆ:
ಆಧಾರ್ ಕಾರ್ಡ್

ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ದತ್ತು ಸ್ವೀಕಾರ/ ದಿವ್ಯಾಂಗರಿಗೆ ವಿಲ್ ಚೇರ್ ವಿತರಣೆ ಹಾಗೂ ಕೇಂದ್ರ/ ರಾಜ್ಯ ಸರಕಾರದ ಸವಲತ್ತುಗಳ ಸಮಗ್ರ ಶಿಬಿರ/ ನಗರಸಭೆ ನೀರಿನ ಜೋಡಣೆಗೆ ಬೇಕಾಗುವ ದಾಖಲೆ

ರೇಷನ್ ಕಾರ್ಡ್
ಆಧಾರ್ ಕಾರ್ಡ್
ಪ್ರಸ್ತುತ ಸಾಲಿನ ತೆರಿಗೆ ರಶೀದಿ

ಪರಿಶಿಷ್ಟ ಜಾತಿ/ಪಂಗಡದವರಿಗೆ ಆರೋಗ್ಯ ವಿಮೆಗೆ ಬೇಕಾಗುವ ದಾಖಲೆ:

ಹಳೆ ವಿಮೇ ಕಾರ್ಡ್
ರೇಷನ್ ಕಾರ್ಡ್
ಆಧಾರ್ ಕಾರ್ಡ್
ಜಾತಿ ಆದಾಯ ಸರ್ಟಿಫಿಕೇಟ್

ಗೃಹಲಕ್ಷ್ಮಿ ಯೋಜನೆಗೆ ಬೇಕಾಗುವ ದಾಖಲೆ:

ರೇಷನ್ ಕಾರ್ಡ್
ಗಂಡನ ಆಧಾರ್ ಕಾರ್ಡ್