ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿ ಹಾಗೂ ಅಬಿ ನೇತ್ರ ಐಕೇರ್, ಓಕುಡೆ ಡೈಗ್ನೋಸ್ಟಿಕ್ ಸೆಂಟರ್ ಉಡುಪಿ ಹಾಗೂ ಸಾಯಿರಾಧಾ ರೆಸಿಡೆನ್ಸಿ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ನವಂಬರ್ 6 ರವಿವಾರದಂದು ಸಾಯಿರಾಧಾ ರೆಸಿಡೆನ್ಸಿ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಲಯನ್ಸ್ ಕ್ಲಬ್ ಬ್ರಹ್ಮಗಿರಿ ಅಧ್ಯಕ್ಷ ಲಯನ್ ಉಮೇಶ್ ನಾಯಕ್, ಸೊಸೈಟಿಯ ಅಧ್ಯಕ್ಷ ಜಹೀರ್ ಅಲಿ, ಕಾರ್ಯದರ್ಶಿ ಜೀವನ್ ವಿಲಿಯಂ ಡಿಸೋಜ, ಡಾಕ್ಟರ್ ಅಭಿನಯ ಅಶೋಕ್ ಓಕುಡೆ ಮತ್ತು ಜಿಲ್ಲಾ ವಿಝನ್ ಕೇರ್ ಸಂಯೋಜಕ ಲಯನ್ ವಾದಿರಾಜ ರಾವ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಒಟ್ಟು 98 ಜನರು ಈ ಶಿಬಿರದ ಉಪಯೋಗವನ್ನು ಪಡೆದರು.