ಕಾರ್ಕಳ : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವೈದ್ಯಕೀಯ ವಿಭಾಗ, ರಾಜಯೋಗ ಶಿಕ್ಷಣ ಮತ್ತು ಸಂಶೋದನಾ ಪ್ರತಿಷ್ಠಾನ, ಮೌಂಟ್ಅಬು ಇದರ ಆಶ್ರಯದಲ್ಲಿ ಡಿಸೆಂಬರ್ ೯ರಂದು ಕಾರ್ಕಳ ಅನಂತಶಯನ ರೋಟರಿ ಬಾಲಭವನದಲ್ಲಿ ಸಕ್ಕರೆ ಕಾಯಿಲೆ ರೋಗದ ತಿಳುವಳಿಕೆ ಉಚಿತ ಮಾಹಿತಿ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ಕ್ಯಾನ್ಸರ್ ತಜ್ಞ ಹಾಗೂ ಎಂಡೋಸ್ಕೋಪಿ, ಲ್ಯಾಪ್ರೋಸ್ಕೋಪಿ, ಮತ್ತು ಮಧುಮೇಹ ತಜ್ಞ ವೈದ್ಯಕೀಯ ವಿಭಾಗ, ರಾಜಯೋಗ ಶಿಕ್ಷಣ ಮತ್ತು ಸಂಶೋದನಾ ಪ್ರತಿಷ್ಠಾನದ ಡಾ| ಗೌತಮ್ ಲೋದಯ, ಹಾವೇರಿ, ಮಾತನಾಡಿ, ಧ್ಯಾನ ಹಾಗೂ ವ್ಯಾಯಾಮದಿಂದ ಮಧುಮೇಹ ರೋಗವನ್ನು ಗುಣಪಡಿಸಬಹುದು ಎಂದು ತಿಳಿಸಿದರು. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾರ್ಕಳ ಸೇವಾಕೇಂದ್ರದ ಸಂಚಾಲಕಿ ಬಿ. ಕೆ. ವಿಜಯಲಕ್ಷ್ಮೀ ಮಾತನಾಡಿ, ಧ್ಯಾನವೇ ಔಷಧಿ ಎನ್ನುವ ವಿಷಯದ ಕುರಿತು ತಿಳಿಸಿದರು.
ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಕಾರ್ತಿಕ್ ಮಾತನಾಡಿ, ಆತ್ಮಜ್ಞಾನದಿಂದ ಮನಸಿನ ಏಕಾಗ್ರತೆಯೊಂದಿಗೆ ಮನಸು ಹಾಗೂ ಬುದ್ದಿ ನಿಯಂತ್ರಣದಲ್ಲಿ ತರಬಹುದು ಆರೋಗ್ಯ ಪಡೆಯಬಹುದು ಎಂದರು.
ಆರ್ಯವೇದ ವೈದ ಡಾ| ರವಿರಾಜ್ ಶೆಟ್ಟಿ ಭಾಗವಹಿಸಿ, ಮಧುಮೇಹ ರೋಗಿಗಳು ಉಪಯೋಗಿಸುವ ಆಹಾರ ಸೇವನೆಯ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಉದ್ಯಮಿ ರೊ| ಚಂದ್ರಶೇಖರ ಹೆಗ್ಡೆ, ಪುರಸಭಾ ಸದಸ್ಯೆ ಮೀನಾಕ್ಷಿ ಗಂಗಾಧರ ಶುಭ ಹಾರೈಸಿದರು.