ಕೊಡವೂರು: ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಗೆಳೆಯರ ಬಳಗ ಲಕ್ಷ್ಮೀ ನಗರ, ಡಿಜಿಟಲ್ ಸೇವಾ ಕೇಂದ್ರ ಕೊಡವೂರು ಇವರ ಸಹಯೋಗದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರವು ನ.13 ರಂದು ಲಕ್ಷ್ಮೀ ನಗರ ಪೇಟೆಯಲ್ಲಿ ನಡೆಯಿತು.
ಶಿಬಿರವನ್ನು ಹಿರಿಯರಾದ ಶೇಕರ್ ಲಕ್ಷ್ಮೀನಗರ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಸಭಾ ಸದಸ್ಯವಿಜಯ್ ಕೊಡವೂರು, ಈಗಾಗಲೇ ಕೊಡವೂರು ವಾರ್ಡಿನಲ್ಲಿ ಇಂತಹ ಶಿಬಿರವನ್ನು ಸಂಘ ಸಂಸ್ಥೆಗಳ ಸಹಯೋಗದಿಂದ ಮಾಡುತ್ತಾ ಇದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯನ್ನು ಸಾರ್ವಜನಿಕರಿಗೆ ತಲುಪಿಸಲು ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಒಟ್ಟು 73 ಜನ ಉಚಿತ ಶಿಬಿರದ ಪ್ರಯೋಜನವನ್ನು ಪಡೆದರು.
ಗೆಳೆಯರ ಬಳಗದ ಅಧ್ಯಕ್ಷ ಪ್ರಶಾಂತ್, ಸುಶ್ಮಿತಾ ಡಿಜಿಟಲ್ ಸೇವಾ ಕೇಂದ್ರ ಕೊಡವೂರು, ಸವಿತ ಡಿ. ಪಿ.ಎಚ್.ಸಿ.ಒ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ, ಅಮಿತ್,ರಮೇಶ್, ರವಿ, ರಾಜೇಶ್, ವಿನಯ್ ಮತ್ತಿತರರು ಉಪಸ್ಥಿತರಿದ್ದರು.