ಕೊರೋನಾ ಕಾಟ ಮತ್ತೆ ಶುರುವಾಗುವ ಲಕ್ಷಣ ಕಾಣ್ತಿದೆ.ಭಾರತದಲ್ಲಿ ಜೂನ್ ನಿಂದ ಕೊರೋನಾ ನಾಲ್ಕನೆಯ ಅಲೆ ಶುರುವಾಗಲಿದೆಯಂತೆ ಎನ್ನುವುದು ಈ ಕ್ಷಣದ ಲೆಟೆಸ್ಟ್ ಅಪ್ ಡೇಟ್. ಹೌದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ (ಐಐಟಿ-ಕೆ) ಸಂಶೋಧಕರು ಇಲ್ಲೊಂದು ಆಘಾತಕಾರಿ ಸುದ್ದಿಯೊಂದನ್ನು ಬಿಚ್ಚಿಟ್ಟಿದ್ದಾರೆ ನೋಡಿ. ಅದೇನಪ್ಪಾ ಎಂದರೆ ಭಾರತದಲ್ಲಿ ಜೂನ್ನಲ್ಲಿ ನಾಲ್ಕನೇ ಅಲೆ ಶುರುವಾಗಲಿದೆಯಂತೆ ಎಂದು ಸಂಶೋದಕರು ಭವಿಷ್ಯ ನುಡಿದಿದ್ದಾರೆ.
ಐಐಟಿ-ಕೆ ಸಂಶೋಧಕರು ನಡೆಸಿದ ಸಂಶೋಧನೆಯ ಪ್ರಕಾರ, ಭಾರತವು ಜೂನ್ ತಿಂಗಳ ಮಧ್ಯ ಅಥವಾ ಅಂತ್ಯದಲ್ಲಿ ಕೋವಿಡ್-19 ನಾಲ್ಕನೆಯ ಅಲೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಮತ್ತು ಈ ಅಲೆಯು ಸುಮಾರು 4 ತಿಂಗಳುಗಳವರೆಗೆ ಹಾಗೆಯೇ ಮುಂದುವರಿಯಲಿದೆ. ಆದರೂ, ಅಲೆಯ ತೀವ್ರತೆಯು ಹೊಸ ರೂಪಾಂತರಗಳ ಉಗಮ, ಲಸಿಕೆ ಸ್ಥಿತಿ ಮತ್ತು ಬೂಸ್ಟರ್ ಡೋಸ್ಗಳ ನೀಡುವಿಕೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ. ಸದ್ಯ ಜಗತ್ತು ಕೊರೋನಾ ಕಡಿಮೆಯಾಯ್ತು ಎನ್ನುವ ನಿಟ್ಟುಸಿರು ಬಿಡುವ ಮೊದಲೇ ನಾಲ್ಕನೇ ಅಲೆಯ ಸುದ್ದಿ ಕೇಳಿ ಬರುತ್ತಿರುವುದು ಆತಂಕ ಮೂಡಿಸಿದೆ.