ನವದೆಹಲಿ: ಭಾರತದಲ್ಲಿ 2,527 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, ಕಳೆದ 24 ಗಂಟೆಗಳಲ್ಲಿ 33 ಸಾವುಗಳು, ಒಟ್ಟು ಸಾವಿನ ಸಂಖ್ಯೆಯನ್ನು 5,22,149 ಕ್ಕೆ ಏರಿಸಿದೆ ಎಂದು ಆರೋಗ್ಯ ಸಚಿವಾಲಯವು ಮಾಹಿತಿ ಬಿಡುಗಡೆ ಮಾಡಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15,079. ದೇಶವು ಒಂದು ದಿನದಲ್ಲಿ 1,656 ಚೇತರಿಕೆ ದಾಖಲಿಸಿದ್ದು, ಒಟ್ಟು ಚೇತರಿಕೆಯ ಸಂಖ್ಯೆ 4,25,17,724.
ದೇಶಾದ್ಯಂತ ಅದರಲ್ಲೂ ವಿಶೇಷವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆ ದಾಖಲಾಗುತ್ತಿದ್ದರೂ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗುವವರ ಸಂಖ್ಯೆ ಕಡಿಮೆ ಇದೆ ಎಂದು ಸಚಿವಾಲಯವು ತಿಳಿಸಿದೆ.
ಕೋವಿಡ್-19 ನ ಹೊಸ ರೂಪಾಂತರಿ ಪ್ರಬೇಧಗಳು ದೇಶದಲ್ಲಿ ನಾಲ್ಕನೇ ಅಲೆಯ ಶಂಕೆಯನ್ನು ಹುಟ್ಟು ಹಾಕುತ್ತಿದ್ದು, ನಾಗರಿಕರು ಆದಷ್ಟು ಎಚ್ಚರಿಕೆಯಿಂದ ಇರಬೇಕು ಮತ್ತು ಕೋವಿಡ್ ಸುರಕ್ಷತಾ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಸಚಿವಾಲಯವು ಪದೇ ಪದೇ ಸೂಚನೆ ನೀಡುತ್ತಿದೆ.