ಸುರತ್ಕಲ್: ಪರೀಕ್ಷೆ ಮುಗಿಸಿ ನಾಪತ್ತೆಯಾಗಿದ್ದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾದಾಯಿನಿ ಶಾಲೆಯ ನಾಲ್ವರು ವಿದ್ಯಾರ್ಥಿಗಳ ಶವ ಹಳೆಯಂಗಡಿ ಬಳಿಯ ನಂದಿನಿ ನದಿಯಲ್ಲಿ ಕರಿತೊಟದ ರೈಲ್ವೆ ಸೇತುವೆ ಕೆಳಗೆ ಪತ್ತೆಯಾಗಿವೆ.
ಅಗರಮೇಲು ಗ್ರಾಮದ ಚಂದ್ರಕಾಂತ್ ಅವರ ಮಗ ಯಶ್ವಿತ್ (15), ಹಳೆಯಂಗಡಿ ತೋಕೂರು ನಿವಾಸಿ ವಸಂತ್ ಅವರ ಮಗ ರಾಘವೇಂದ್ರ(15), ಸುರತ್ಕಲ್ ಗುಡ್ಡ್ಡಕೊಪ್ಪಳ ನಿವಾಸಿ ವಿಶ್ವನಾಥ್ ಅವರ ಮಗ ನಿರೂಪ(15), ಚಿತ್ರಾಪುರ ನಿವಾಸಿ ದೇವದಾಸ್ ಅವರ ಮಗ ಅನ್ವಿತ್ (15) ಮೃತ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಇವರು ಇಂಗ್ಲಿಷ್ ಪೂರ್ವಸಿದ್ಧತಾ ಪರೀಕ್ಷೆಗೆ ಮಂಗಳವಾರ ಹಾಜರಾಗಿದ್ದರು. ಆ ಬಳಿಕ ಮನೆಗೆ ಮರಳದೇ ನಾಪತ್ತೆಯಾಗಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.
ಸ್ನಾನಕ್ಕೆ ನದಿಗೆ ಇಳಿದಾಗ ಈ ಬಾಲಕರು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.