ಕಾರುಗಳ ಮಧ್ಯೆ ಅಪಘಾತ: ನಾಲ್ವರಿಗೆ ಗಂಭೀರ ಗಾಯ

ಉಡುಪಿ: ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಬ್ರಿ ತಾಲೂಕಿನ ನಾಡ್ಪಾಲು ಜಕ್ಕನಮಕ್ಕಿ ಎಂಬಲ್ಲಿ ನಡೆದಿದೆ.

ಬೈಕನ್ನು ಕಾರೊಂದು ಓವರ್ ಟೇಕ್ ಮಾಡುವಾಗ ಮುಂದಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಅಪಘಾತದ ರಭಸಕ್ಕೆ ಕಾರುಗಳು ಹಾಗೂ ಬೈಕ್ ನುಜ್ಜುಗುಜ್ಜಾಗಿವೆ. ಸ್ಥಳಕ್ಕೆ ಹೆಬ್ರಿ ಪಿಎಸ್ಐ ಮಹೇಶ್‌ ಟಿಎಂ ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.

ಅಪಘಾತದಿಂದ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು.