ಮೈಸೂರಿನ ಕುಟುಂಬ ಮಂಗಳೂರಿನಲ್ಲಿ ಆತ್ಮಹತ್ಯೆ

ಮಂಗಳೂರು: ನಗರದ ಕೆಎಸ್ ರಾವ್ ರಸ್ತೆಯಲ್ಲಿರುವ ಲಾಡ್ಜ್‌ ಒಂದರಲ್ಲಿ ಮೈಸೂರಿನಿಂದ ಬಂದಿದ್ದರೆನ್ನಲಾದ ಒಂದೇ ಕುಟುಂಬದ ನಾಲ್ವರು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಮೃತರನ್ನು ದೇವೇಂದ್ರ (48), ನಿರ್ಮಲಾ (38) ಮತ್ತು 9 ವರ್ಷದ ಅವಳಿ ಹೆಣ್ಣು ಮಕ್ಕಳಾದ ಚೈತ್ರ ಮತ್ತು ಚೈತನ್ಯ ಎಂದು ಗುರುತಿಸಲಾಗಿದೆ.

ಕುಟುಂಬವು ಮಾರ್ಚ್ 27 ರಂದು ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡಿತ್ತು ಮತ್ತು ಮಾರ್ಚ್ 30 ರಂದು ಖಾಲಿಮಾಡಬೇಕಾಗಿತ್ತು. ಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಪತ್ನಿ ಹಾಗೂ ಇಬ್ಬರು ಮಕ್ಕಳು ಮಲಗಿದ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಶವಗಳ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆಗೆ ಶರಣಾಗುವುದಾಗಿ ಬರೆಯಲಾಗಿದೆ.

ಬಂದರು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.