ಭೋಪಾಲ್: ಭಾರತದ ಚಿರತೆಯ ಆಮದುಗಳ ತವರು ಮಧ್ಯಪ್ರದೇಶದಲ್ಲಿರುವ ಕುನೊ ರಾಷ್ಟ್ರೀಯ ಉದ್ಯಾನವನವು ಪ್ರಾಜೆಕ್ಟ್ ಚೀತಾದ ಭಾಗವಾಗಿ ತನ್ನ ಮೊದಲ ಮರಿ ಚಿರತೆಗಳನ್ನು ಸ್ವಾಗತಿಸಿದೆ. ಚಿರತೆಗಳ ಸಂರಕ್ಷಣೆ ಮತ್ತು ಮರುಪರಿಚಯ ಯೋಜನೆಯಲ್ಲಿ ತೊಡಗಿರುವ ಅಧಿಕಾರಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಚಿರತೆ ಮರಿಗಳ ಜನನವು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳು ತಮ್ಮ ಹೊಸ ಪರಿಸರಕ್ಕೆ ಉತ್ತಮವಾಗಿ ಹೊಂದಿಕೊಳ್ಳುವ ಸಕಾರಾತ್ಮಕ ಸಂಕೇತವಾಗಿದೆ ಎಂದಿದ್ದಾರೆ.
ಚಿರತೆಗಳ ಸ್ಥಳೀಯ ಅಳಿವಿನ ಏಳು ದಶಕಗಳ ನಂತರ, ಭಾರತವು ಸೆಪ್ಟೆಂಬರ್ 2022 ರಲ್ಲಿ ತನ್ನ ಮಧ್ಯಪ್ರದೇಶದ ಕಾಡಿನಲ್ಲಿ ಎಂಟು ಚಿರತೆಗಳನ್ನು ಮರುಪರಿಚಯಿಸಿದೆ.
ಈ ಮಧ್ಯೆ ನಮೀಬಿಯಾದಿಂದ ಮೊದಲ ಬ್ಯಾಚಿನಲ್ಲಿ ಭಾರತಕ್ಕೆ ತರಲಾಗಿದ್ದ ಎಂಟುಚಿರತೆಗಳಲ್ಲಿ ಅತಿ ಹೆಚ್ಚು ವಯಸ್ಸಿನ ಶಾಶಾ ಎಂಬ ಹೆಣ್ಣು ಚಿರತೆ ಸೋಮವಾರದಂದು ಮೃತಪಟ್ಟಿದೆ. ಐದು ವರ್ಷದ ಶಾಶಾ ಭಾರತಕ್ಕೆ ಕರೆತರುವ ಮೊದಲು ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿತ್ತು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.