ದೊಡ್ಡಣಗುಡ್ಡೆ: ಇಂದು ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಗಾಯತ್ರಿ ದೇವಿ ಗುಡಿಯ ಶಿಲಾನ್ಯಾಸ ಕಾರ್ಯಕ್ರಮ

ಉಡುಪಿ: ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ವೇ.ಮೂ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಅ. 22ರಂದು ಗಾಯತ್ರಿ ಧ್ಯಾನಪೀಠದಲ್ಲಿ ವೇದ ಮಾತೆ ಶ್ರೀ ಗಾಯತ್ರಿ ದೇವಿಯ ನೂತನ ಶಿಲಾಮಯ ಗುಡಿಗೆ ಶಿಲಾ ಮುಹೂರ್ತ ನೆರವೇರಲಿದೆ.

ಕ್ಷೇತ್ರದಲ್ಲಿ ಶನಿವಾರ ಜಯಲಕ್ಷ್ಮಿ ಬಾಯರಿ ಹಾಗೂ ದಿ. ನಾರಾಯಣ ಉಪಾಧ್ಯಾಯ ಅವರ ಸೇವಾರ್ಥವಾಗಿ ಜೋಡಿ ಚಂಡಿಕಾಯಾಗ ಸಮರ್ಪಿತಗೊಂಡಿತು. ಉಮಾ ಮಹೇಶ್ವರ ಭಜನ ಮಂಡಳಿ ಹಾಗೂ ತರಂಗಣಿ ಭಜನ ಮಂಡಳಿಯವರಿಂದ ಭಜನೆ ಸಂಕೀರ್ತನೆ ನೆರವೇರಿತು. ಪದ್ಮಿನಿ ರಾಜೇಶ್ ಶೆಟ್ಟಿ ದಂಪತಿಯಿಂದ ರಂಗ ಪೂಜಾ ಸಹಿತ ದುರ್ಗಾ ನಮಸ್ಕಾರ ಪೂಜೆ ನೆರವೇರಿತು.

ಯಶಾ ರಾಮಕೃಷ್ಣ ನೇತೃತ್ವದ ಹೆಜ್ಜೆಗೆಜ್ಜೆ ತಂಡದವರಿಂದ ನೃತ್ಯ ವೈವಿಧ್ಯ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೆರವೇರಿತು. ಮಧ್ಯಾಹ್ನ ಹಾಗೂ ಸಂಜೆ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ, ಸಂಗೀತ ಸೇವೆ ಹಾಗೂ ಗಾನ ನಾದ ಸೇವೆ ವಿವಿಧ ಕಲಾವಿದರಿಂದ ಸಮರ್ಪಿಸಲ್ಪಟ್ಟಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.

ವೇದಮಾತೆಗೆ ಗುಡಿ ಸಂಕಲ್ಪ

ಈಗಾಗಲೇ ಗಾಯತ್ರಿ ಧ್ಯಾನಪೀಠದಲ್ಲಿ ಕಪಿಲ ಮಹರ್ಷಿಗಳ ಸಾನಿಧ್ಯ ಪ್ರಬಲಗೊಂಡಿದ್ದು ಮುನಿಶ್ರೇಷ್ಠರನ್ನು ಅನುಗ್ರಹಿಸಿದ ವೇದ ಮಾತೆ ಗಾಯತ್ರಿ ದೇವಿಗೂ ಸ್ಥಾನ ಸಂಕಲ್ಪಿಸಲಾಗಿದೆ. ರಮಾನಂದ ಗುರೂಜಿಯವರು ದುರ್ಗಾ ಆದಿಶಕ್ತಿಯಯು ಪ್ರೇರೇಪಿಸಿದಂತೆ ಕಾರ್ಯ ಪ್ರವೃತ್ತರಾಗಿದ್ದು, ಈ ರಮೋತ್ಸವ ಕಾಲದಲ್ಲಿ ದುರ್ಗಾಷ್ಟಮಿಯ ಪರ್ವಕಾಲದಲ್ಲಿ ಬೆಳಗ್ಗೆ ಒದಗಿ ಬರುವ ಶುಭ ಮುಹೂರ್ತದಲ್ಲಿ ಶಿಲಾಮಯ ಗುಡಿಗೆ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಭಕ್ತ ಸಮೂಹದ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಶಕ್ತಿ ಚೈತನ್ಯಗಳ ಇಚ್ಛೆಯಂತೆ ಇಲ್ಲಿ ನೆರವೇರುವ ಎಲ್ಲ ಕಾರ್ಯಗಳು ನಿರ್ವಿಘ್ನತೆಯಿಂದ ನೆರವೇರುತ್ತಿದೆ. ಗತಕಾಲದ ಕ್ಷೇತ್ರ ವೈಭವ ಮರುಕಳಿಸುವ ಕಾಲ ಸನ್ನಿ ಹಿತವಾಗಿದೆ.