ಮಲ್ಪೆ: ಶ್ರೀರಾಮಮಂದಿರದಲ್ಲಿ ಇತ್ತೀಚಿಗೆ ಜರುಗಿದ ರಜತ ಸಂಭ್ರಮಕ್ಕೆ ಪೂರಕವಾಗಿ ನಡೆಯುವ ದ್ವಿತೀಯ ಹಂತದ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಅರ್ಚಕರ ನೂತನ ವಸತಿ ಗೃಹ ಹಾಗೂ ಅತಿಥಿ ಗೃಹದ ಶಂಕು ಸ್ಥಾಪನೆ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು.
ವೇದಮೂರ್ತಿ ಜಯದೇವ ಭಟ್ ಮತ್ತು ವಿಗ್ನೇಶ್ ಭಟ್ ಅವರ ನೇತೃತ್ವದಲ್ಲಿ ದಿ.ಟಿ.ಎಂ.ಎ . ಪೈಯವರ ಪುತ್ರ ಟಿ. ನಾರಾಯಣ ಪೈ ಮತ್ತು ಅವರ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಪೈ ಇವರ ಹಸ್ತದಿಂದ, ಸಮಾಜದ ಹಿರಿಯರ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ನೆರವೇರಿತು.
ಈ ಸಂಧರ್ಭದಲ್ಲಿ ಶ್ರೀರಾಮ ಮಂದಿರದ ಅಧ್ಯಕ್ಷ ಗೋಕುಲದಾಸ್ ಪೈ, ಐ.ಸಿ.ಡಿ.ಎಸ್ ಲಿ. ನ ಕಂಪನಿ ಸೆಕ್ರೆಟರಿ ಪ್ರಭಾಕರ್ ಪೈ, ವಿಶ್ವನಾಥ್ ಭಟ್, ಹನುಮಂತ ಕಾಮತ್, ವೈಕುಂಠ ನಾಯಕ, ಶಿವಾನಂದ ಭಂಡಾರಕರ್, ಅನಂತ್ ಶೆಣೈ , ರಾಧಾಕೃಷ್ಣ ಶೆಣೈ , ಅನಂತ್ ಕಾಮತ್, ದೇವ್ರಾಯ್ ಭಟ್, ಸುರೇಂದ್ರ ಭಂಡಾರಕರ್, ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಶಾಲಿನಿ ಜಿ ಪೈ, ಶ್ರೀಮತಿ ವಿಜಯ ಶೆಣೈ , ಶ್ರೀಮತಿ ಪ್ರಭಾವತಿ ನಾಯಕ, ಶ್ರೀಮತಿ ಪ್ರತೀಕ್ಷಾ ಭಂಡಾರಕರ್, ಶ್ರೀಮತಿ ಶಾಂತಿ ಶೆಣೈ , ಶ್ರೀಮತಿ ಸುಷ್ಮಾ ಶೆಣೈ , ಶ್ರೀಮತಿ ಮಮತಾ ಪೈ, ಶ್ರೀಮತಿ ಶ್ರೇಯಾ ಶೆಣೈ , ಶ್ರೀಮತಿ ವಸುಧ ವಿ.ಕಾಮತ್, ಯುವಕ ಮಂಡಳಿಯ ಸುನಿಲ್ ಶೆಣೈ , ಗೋವಿಂದ್ರಾಯ್ ಭಂಡಾರಕರ್, ದಿನೇಶ್ ಗಡಿಯಾರ, ಪವನ್ ಭಂಡಾರಕರ್, ರಾಮಚಂದ್ರ ಶೆಣೈ, ಮಾಯಾಂಕ್ ಕಾಮತ್ ಮತ್ತು ಸಮಾಜದ ಹಿರಿಯ ಗಣ್ಯರು ಉಪಸ್ಥಿತರಿದ್ದರು.
ಸುಧೀರ್ ಶೆಣೈ ಸ್ವಾಗತಿಸಿದರು, ಅನಿಲ್ ಕಾಮತ್ ವಂದಿಸಿದರು.