ಉಡುಪಿ ಕೃಷ್ಣ ಮಠದ ರಥಬೀದಿಯಲ್ಲಿ ಕನಕದಾಸರ ಶಿಲಾಮಯ ಗುಡಿಗೆ ಶಿಲಾನ್ಯಾಸ

ಉಡುಪಿ: ಕೃಷ್ಣ ಮಠದ ರಥಬೀದಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕನಕದಾಸರ ಶಿಲಾಮಯ ಗುಡಿಗೆ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ವಿಡಿಯೋ ಕರೆ ಮೂಲಕ ಅನುಗ್ರಹ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಶೀರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ, ಪಾರುಪತ್ಯೆಗಾರ ಶ್ರೀಶ ಭಟ್ ಕಡೇಕಾರು, ಉತ್ತರಾದಿ ಮಠದ ವಿದ್ವಾಂಸರಾದ ಸತ್ಯಧ್ಯಾನ ಆಚಾರ್ಯ ಕಟ್ಟಿ, ವಿದ್ಯಾಸಿಂಹಾಚಾರ್ ಮಾಹುಲಿ, ವಿದ್ಯಾಧೀಶಾಚಾರ್ ಗುತ್ತಲ್, ಪ್ರಕಾಶ್ ಆಚಾರ್ ಸವಣೂರು, ಪಾಂಡುರಂಗಾಚಾರ್ ರೊಟ್ಟಿ, ಆನಂದತೀರ್ಥಾಚಾರ್ ಚಿಮ್ಮಲಿ ಹಾಗೂ ಕಾರ್ತಿಕ್ ಆಚಾರ್ ಉಪಸ್ಥಿತರಿದ್ದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಭಕ್ತ ಕನಕದಾಸ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ಸಿ.ಎಲ್. ಆನಂದ್, ಆದಿ ಅಧ್ಯಕ್ಷ ಸಿದ್ದರಾಜು ಕೆ.ಎಸ್., ಉಪಾಧ್ಯಕ್ಷ ಬಾಬು ಎಸ್.ಎನ್., ಪ್ರಧಾನ ಕಾರ್ಯದರ್ಶಿ ದಯಾನಂದ್ ಸಿ.ಕೆ., ಸಮಾಜಸೇವಕ ಚಂದ್ರಶೇಖರ್, ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಹನುಮಂತ ಡೂಳ್ಳಿನ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಸಹಕಾರ್ಯದರ್ಶಿ ಬಸವರಾಜ್ ಕುರುಬರ್, ಹನುಮಂತ ಆಡಿನ್, ಬ್ಯಾನಪ್ಪ ಎಚ್. ಕುರಿ, ದೇವು ಪೂಜಾರಿ, ನಿತಿನ್ ಮೈಸೂರು ಸೇರಿದಂತೆ ವಿವಿಧ ಸಂಘಟನೆಗಳ ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.