ಕುಂದಾಪುರ: ವೈದ್ಯಕೀಯ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಹಂಬಲವಿರುವ ವಿದ್ಯಾರ್ಥಿಗಳಿಗೆ ಈಗಿನ ಕಲಿಕಾ ವಾತಾವರಣಕ್ಕೆ ಪೂರಕವಾಗಿರುವಂತಹ ಕೋರ್ಸ್ ಗಳನ್ನು ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಪ್ರಸ್ತುತ ಪಡಿಸುತ್ತಿದೆ.
ನರ್ಸಿಂಗ್, ಆಸ್ಪತ್ರೆ ಆಡಳಿತ, ಅರೆವೈದ್ಯಕೀಯ, ವಾಣಿಜ್ಯಶಾಸ್ತ್ರ ಮುಂತಾದ ವಿಭಾಗಗಳಿರುವ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನಲ್ಲಿ ಲಭ್ಯವಿರುವ ಕೋರ್ಸ್‌ಗಳು
ಬಿ.ಎಸ್ಸಿ. ನರ್ಸಿಂಗ್ ಕೋರ್ಸ್: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಇದರ ಅಂಗಸಂಸ್ಥೆಯಲ್ಲಿ 4 ವರ್ಷಗಳ ಬಿ.ಎಸ್ಸಿ. ನರ್ಸಿಂಗ್ ಕೋರ್ಸ್ ಲಭ್ಯವಿದ್ದು ಪಿಯುಸಿಯಲ್ಲಿ ಜೀವಶಾಸ್ತ್ರ ಅಥವಾ ತತ್ಸಮಾನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರಬೇಕು. ಆಸ್ಪತ್ರೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಈ ಕೋರ್ಸಿಗೆ ಬಹು ಬೇಡಿಕೆ ಇದೆ.
ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ: ಕರ್ನಾಟಕ ಸ್ಟೇಟ್ ಡಿಪ್ಲೊಮಾ ಇನ್ ನರ್ಸಿಂಗ್ ಪರೀಕ್ಷಾ ಮಂಡಳಿಯ ಅಂಗಸಂಸ್ಥೆಯಲ್ಲಿ 3 ವರ್ಷಗಳ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ ಕೋರ್ಸ್ ಲಭ್ಯವಿದ್ದು, 10+ 2 ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಉದ್ಯೋಗ ವ್ಯಾಪ್ತಿ: ಆಸ್ಪತ್ರೆಗಳು ಮತ್ತು ಆರೋಗ್ಯ ಕ್ಷೇತ್ರ.
ಬ್ಯಾಚುಲರ್ ಆಫ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಇದರ ಅಂಗಸಂಸ್ಥೆಯಲ್ಲಿ 3 ವರ್ಷಗಳ ಕೋರ್ಸ್ ಇದಾಗಿದ್ದು, 10+ 2 ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಉದ್ಯೋಗ ವ್ಯಾಪ್ತಿ: ಆಸ್ಪತ್ರೆಗಳು ಮತ್ತು ಆರೋಗ್ಯ ಕ್ಷೇತ್ರ.
ಎಕ್ಸ್-ರೇ ತಂತ್ರಜ್ಞಾನದಲ್ಲಿ ಡಿಪ್ಲೊಮಾ: ಕರ್ನಾಟಕ ಅರೆವೈದ್ಯಕೀಯ ಮಂಡಳಿ, ಬೆಂಗಳೂರು ಇದರ ಅಂಗಸಂಸ್ಥೆಯಲ್ಲಿ ಒಟಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಮತ್ತು ಮೆಡಿಕಲ್ ಲ್ಯಾಬ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಕೋರ್ಸ್ ಲಭ್ಯವಿದ್ದು, ಎಸ್.ಎಸ್.ಎಲ್. ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಉದ್ಯೋಗ ವ್ಯಾಪ್ತಿ: ಆಸ್ಪತ್ರೆಗಳು ಮತ್ತು ಆರೋಗ್ಯ ಕ್ಷೇತ್ರ
ಬ್ಯಾಚುಲರ್ ಆಫ್ ಕಾಮರ್ಸ್: ಮಂಗಳೂರು ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾದ ಬಿ.ಡಿ. ಶೆಟ್ಟಿ ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ(ರಾ.ಹೆ 66, ಮಾಬುಕಳ, ಉಡುಪಿ ಜಿಲ್ಲೆ) ಬ್ಯಾಚುಲರ್ ಆಫ್ ಕಾರ್ಮರ್ಸ್- ಜಿಎಸ್ಟಿ, ಟ್ಯಾಲಿ ಕೋರ್ಸ್ ಗಳು ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಈ ವಿಳಾಸವನ್ನು ಸಂಪರ್ಕಿಸಬಹುದು:
ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್
ಮಧುವನ್, ರಾಷ್ಟ್ರೀಯ ಹೆದ್ದಾರಿ 66, ಬ್ರಹ್ಮಾವರ – 576213. ಉಡುಪಿ ಜಿಲ್ಲೆ. ಕರ್ನಾಟಕ.
ವೆಬ್ ಸೈಟ್: www.fortuneacademics.com, ದೂರವಾಣಿ: 9980527073, 7899577495
ಈ ಮೇಲ್: [email protected]