ಮಾಜಿ ಪೋಪ್ ಎಮೆರಿಟಸ್ ಬೆನೆಡಿಕ್ಟ್ XVI ನಿಧನ

ವ್ಯಾಟಿಕನ್ ಸಿಟಿ: 2013 ರಲ್ಲಿ ಮಧ್ಯಯುಗದ ನಂತರ ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲ ಪೋಪ್, ಮಾಜಿ ಪೋಪ್ ಬೆನೆಡಿಕ್ಟ್ XVI ಅವರು ಶನಿವಾರ 95 ನೇ ವಯಸ್ಸಿನಲ್ಲಿ ನಿಧನರಾದರು ಎಂದು ವ್ಯಾಟಿಕನ್ ಘೋಷಿಸಿದೆ.

“ದುಃಖದಿಂದ, ಪೋಪ್ ಎಮೆರಿಟಸ್, ಬೆನೆಡಿಕ್ಟ್ XVI, ಇಂದು ವ್ಯಾಟಿಕನ್‌ನ ಮೇಟರ್ ಎಕ್ಲೇಸಿಯಾ ಮಠದಲ್ಲಿ 9:34 ಕ್ಕೆ ನಿಧನರಾದರು ಎಂದು ನಾನು ನಿಮಗೆ ತಿಳಿಸುತ್ತೇನೆ, ”ಎಂದು ವ್ಯಾಟಿಕನ್ ವಕ್ತಾರ ಮ್ಯಾಟಿಯೊ ಬ್ರೂನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜೋಸೆಫ್ ರಾಟ್ಜಿಂಗರ್ ಎನ್ನುವ ಮೂಲ ಹೆಸರಿನ ಜರ್ಮನಿಯ ಪೋಪ್ ಎಮೆರಿಟಸ್, ಫೆಬ್ರವರಿ 2013 ರಲ್ಲಿ ರಾಜೀನಾಮೆ ನೀಡಿ ವ್ಯಾಟಿಕನ್ ಮೈದಾನದೊಳಗಿನ ಕಾನ್ವೆಂಟ್‌ನಲ್ಲಿ ಶಾಂತ ಜೀವನವನ್ನು ನಡೆಸುತ್ತಿದ್ದರು. ದೀರ್ಘಕಾಲದಿಂದ ಅವರ ಆರೋಗ್ಯವು ಹದಗೆಟ್ಟಿತ್ತು. ಬುಧವಾರ ಅವರ ಪರಿಸ್ಥಿತಿಯು ಹದಗೆಟ್ಟಿದೆ ಎಂದು ವ್ಯಾಟಿಕನ್ ಬಹಿರಂಗಪಡಿಸಿತ್ತು.

ಪೋಪ್ ಫ್ರಾನ್ಸಿಸ್ ನೇತೃತ್ವದಲ್ಲಿ ಪೋಪ್ ಎಮೆರಿಟಸ್ ಅಂತ್ಯಸಂಕಾರಗಳು ನಡೆಯಲಿವೆ ಎಂದು ವರದಿಯಾಗಿದೆ.