ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಎನ್‌ಡಿಎ ನಾಯಕರು ಮಾಜಿ ಪ್ರಧಾನಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ 5 ನೇ ಪುಣ್ಯತಿಥಿಯ ಅಂಗವಾಗಿ ಸದೈವ್ ಅಟಲ್ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸಿದರು.
ಉಪರಾಷ್ಟ್ರಪತಿ ಜಗದೀಪ್ ಧಂಖರ್, ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ರಾಜ್ಯಸಭಾ ಉಪ ಸಭಾಪತಿ ಹರಿವಂಶ್, ಪ್ರಫುಲ್ ಪಟೇಲ್, ಅರ್ಜುನ್ ರಾಮ್ ಮೇಘವಾಲ್, ಕೇಂದ್ರ ಸಚಿವ ಮತ್ತು ಅಪ್ನಾ ದಳ (ಸೋನಿಲಾಲ್) ನಾಯಕಿ ಅನುಪ್ರಿಯಾ ಪಟೇಲ್ ಮತ್ತು ಎಚ್‌ಎಎಂನ ಜಿತನ್ ರಾಮ್ ಮಾಂಝಿ ಗೌರವ ಸಲ್ಲಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಸಾಕು ಮಗಳು ನಮಿತಾ ಕೌಲ್ ಭಟ್ಟಾಚಾರ್ಯ ಪುಷ್ಪ ನಮನ ಸಲ್ಲಿಸಿದರು.