udupixpress
Home Trending ಸರಳೇಬೆಟ್ಟು ವಾರ್ಡ್ ನ ಮಾಜಿ ಕಾಂಗ್ರೆಸ್ ನಗರಸಭಾ ಸದಸ್ಯ ದೇವಾನಂದ ಪೂಜಾರಿ ನಿಧನ

ಸರಳೇಬೆಟ್ಟು ವಾರ್ಡ್ ನ ಮಾಜಿ ಕಾಂಗ್ರೆಸ್ ನಗರಸಭಾ ಸದಸ್ಯ ದೇವಾನಂದ ಪೂಜಾರಿ ನಿಧನ

ಉಡುಪಿ: ಸರಳೇಬೆಟ್ಟು ವಾರ್ಡ್ ನ ಮಾಜಿ ಕಾಂಗ್ರೆಸ್ ನಗರಸಭಾ ಸದಸ್ಯ ದೇವಾನಂದ ಪೂಜಾರಿ (53) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.‌
ಕಾಂಗ್ರೆಸ್ ಪಕ್ಷವನ್ನು ಸರಳೇಬೆಟ್ಟು ವಾರ್ಡಿನಲ್ಲಿ ಕಟ್ಟಿ ಬೆಳೆಸುವಲ್ಲಿ ಹಾಗೂ ನಗರಸಭಾ ಅನುದಾನದಿಂದ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು.  ಸರಳೇಬೆಟ್ಟು ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.  ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ. ಯು, ಆರ್ ಸಭಾಪತಿ,  ಕಾಂಗ್ರೆಸ್ನ ಹಿರಿಯ ಮುಖಂಡ ಮಹಾಬಲ ಕುಂದರ್, ಗಣೇಶ್ ರಾಜ್ ಸರಳೇಬೆಟ್ಟು ಸಂತಾಪ ಸೂಚಿಸಿದ್ದಾರೆ.
error: Content is protected !!