ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರದ ಅಭ್ಯಾಸ ವರ್ಗವು ನಗರದ ಸಂಘನಿಕೇತನದ ಸಭಾಂಗಣದಲ್ಲಿ ನವೆಂಬರ್ 11-12 ರಂದು ಜರುಗಿತು. ಅಭ್ಯಾಸ ವರ್ಗವನ್ನು ಇಂಡಿಯನ್ ರೆಡ್ ಕ್ರಾಸ್ ಜಿಲ್ಲಾ ಘಟಕದ ಮುಖ್ಯಸ್ಥ ಸಿಎ ಶಾಂತರಾಮ್ ಶೆಟ್ಟಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ರಥಬೀದಿಯ ಡಾ. ದಯಾನಂದ ಪೈ ಹಾಗೂ ಡಾ.ಸತೀಶ್ ಪೈ ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಭಾಗವಹಿಸಿದ್ದರು.
ಎಬಿವಿಪಿಯ ಸೈದ್ಧಾಂತಿಕ ಭೂಮಿಕೆ, ಕ್ಯಾಂಪಸ್ ಕಾರ್ಯ, ಕಾರ್ಯಪದ್ಧತಿ ಹಾಗೂ ಶಾಖೆ ಸಂಚಲನೆ ಎಂಬ ನಾಲ್ಕು ಅವಧಿಗಳನ್ನು ತೆಗೆದುಕೊಳ್ಳಲಾಯಿತು.ಈ ವರ್ಗದಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಂಗಳೂರು ವಿಭಾಗ ಪ್ರಮುಖ ಕೇಶವ ಬಂಗೇರ ಇವರು ಮಂಗಳೂರು ಮಹಾನಗರದ ನೂತನ ಕಾರ್ಯಕಾರಿಣಿ ಸಮಿತಿಯನ್ನು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ, ಕರ್ನಾಟಕ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ಮಂಗಳೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಚಿನ್ ಕುಳಗೇರಿ, ಮಂಗಳೂರು ವಿಭಾಗ ಸಂಚಾಲಕ ಹರ್ಷಿತ್ ಕೊಯಿಲ, ಜಿಲ್ಲಾ ಸಂಚಾಲಕ ಶ್ರೇಯಸ್ ಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು.
ಮಂಗಳೂರು ತಾಲೂಕ್ ಸಂಚಾಲಕರಾಗಿ ಆದರ್ಶ ಉಪ್ಪಾರ್, ವಿಭಾಗ ಕಾರ್ಯಲಯ ಕಾರ್ಯದರ್ಶಿಯಾಗಿ ಸ್ಕಂದ ಕಿರಣ್ ಆಯ್ಕೆಯಾದರು. ಮಂಗಳೂರು ಮಹಾನಗರದ ಅಧ್ಯಕ್ಷರಾಗಿ ಶಾರದಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾದ ಶ್ರೀಮತಿ ಭಾರತಿ ಪ್ರಭು, ಕಾರ್ಯದರ್ಶಿಯಾಗಿ ಎಸ್.ಡಿ.ಎಮ್ ಕಾನೂನು ಕಾಲೇಜಿನ ವಿದ್ಯಾರ್ಥಿ ಶ್ರೀಪಾದ್ ತಂತ್ರಿ ಆಯ್ಕೆಯಾದರು.