ಪುತ್ತಿಗೆ ಪರ್ಯಾಯ: ವಿಶ್ವಗೀತಾ ಪರ್ಯಾಯ ಮಹೋತ್ಸವಕ್ಕೆ ವಿದೇಶೀ ಗಣ್ಯರ ಆಗಮನ

ಉಡುಪಿ: ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ವಿಶ್ವಗೀತಾ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಜ. 17 ಮತ್ತು 18 ರಂದು ನಡೆಯುವ ಪರ್ಯಾಯೋತ್ಸವಕ್ಕೆ (Puttige Paryaya) ದೇಶ ವಿದೇಶದ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ ಎಂದು ಮಠದ ವತಿಯಿಂದ ತಿಳಿಸಲಾಗಿದೆ.

ಅಮೆರಿಕದ ವರ್ಲ್ಡ್ ರಿಲೀಜಿಯಸ್‌ ಮತ್ತು ಸ್ಪಿರಿಚ್ಯುವಾಲಿಟಿ ಉಪಾಧ್ಯಕ್ಷ ಡಾ| ವಿಲಿಯಂ ಎಫ್. ವೆಂಡ್ಲಿ, ಆಧುನಿಕ ವಿಜ್ಞಾನ ಮತ್ತು ಐತಿಹಾಸಿಕ ಧರ್ಮಗಳ ನಡುವೆ ಸಮನ್ವಯ ಸಾಧಿಸುವ ಶೇರ್ಡ್‌ ಸೇಕ್ರೆಡ್ಡ್ ಸ್ಟೋರಿ ಯೋಜನೆಯ ಮುಖ್ಯಸ್ಥರಾಗಿರುವ 27 ವರ್ಷ ರಿಲೀಜಿಯನ್ಸ್‌ ಫಾರ್‌ ಪೀಸ್‌ನ ಮಹಾ ಕಾರ್ಯದರ್ಶಿಯಾಗಿದ್ದಾರೆ.

ಫೆಡರೇಶನ್‌ ಆಫ್ ನ್ಯೂ ರಿಲೀಜಿಯಸ್‌ ಆರ್ಗನೈಜೇಶನ್ಸ್‌ ಕಾರ್ಯ ನಿರ್ವಾಹಕ ನಿರ್ದೇಶಕಿ ರೆವರೆಂಡ್‌ ಕೊಶೊ ನಿವಾನೊ, ಟೋಕಿಯೋದಲ್ಲಿ ನೆಲೆಸಿರುವ ಅಧ್ಯಕ್ಷ ನಿಚಿಕೊ ನಿವಾನೊ ಅವರ ಮೊದಲ ಪುತ್ರಿ. ಜಪಾನ್‌ನ ಜನಸಮಾನ್ಯರ ದೊಡ್ಡ ಚಳವಳಿ ‘ರಿಶ್ಯೊ ಕೋಸಿ – ಕ್ಯಾಯ’ ಇದರ ನಿಯೋಜಿತ ಅಧ್ಯಕ್ಷೆ.

ಆಸ್ಟ್ರೇಲಿಯ ವಿಕ್ಟೋರಿಯಾದ ಮಾಜಿ ಸಚಿವ ಅನರೆಬಲ್‌ ಡ್ಯೂಕ್‌ ಡನೆಲನ್‌ ಅವರು ವಿಕ್ಟೋರಿಯದಲ್ಲಿ ದಕ್ಷಿಣ ಭಾರತದ ಹಿಂದೂ ಸಮುದಾಯಕ್ಕಾಗಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸ್ಥಾಪಿಸಿರುವ ಕೃಷ್ಣ ದೇವಾಲಯದ ಹಬ್ಬ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿರಂತರ ಭಾಗವಹಿಸಿ ಪ್ರೋತ್ಸಾಹಿಸುತ್ತಿದ್ದಾರೆ.