ನವದೆಹಲಿ: ಕಳೆದ ಒಂದು ವರ್ಷದಲ್ಲಿ ಮೊದಲ ಬಾರಿಗೆ ತೈಲ ಬೆಲೆಯಲ್ಲಿ ಇಳಿಕೆಯಾಗಿದ್ದು, ಪೆಟ್ರೋಲ್ ದರ ಲೀಟರ್‌ಗೆ 18 ಪೈಸೆ ಮತ್ತು ಡೀಸೆಲ್ ದರ ಲೀಟರ್‌ಗೆ 17 ಪೈಸೆ ಕಡಿಮೆಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿದಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಬುಧವಾರ ಕಡಿಮೆಯಾಗಿದೆ.
ದೆಹಲಿಯಲ್ಲಿ ಈ ಮುಂಚೆ ಪೆಟ್ರೋಲ್ ದರ ಲೀಟರ್‌ಗೆ ₹91.17 ಇತ್ತು. ಆದರೆ, ಬುಧವಾರ ₹90.99ಕ್ಕೆ ಇಳಿದಿದೆ. ಡೀಸೆಲ್ ದರ ಈ ಹಿಂದೆ ಲೀಟರ್‌ಗೆ ₹81.47 ಇತ್ತು. ಈಗ ಲೀಟರ್‌ಗೆ ₹ 81.30 ಇದೆ.
ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಂಧನ ಬೆಲೆಯಲ್ಲಿ ಇಳಿಕೆಯಾಗಿದೆ. ಈ ಹಿಂದೆ ಮಾರ್ಚ್ 16, 2020ರಲ್ಲಿ ಇಂಧನ ದರವು ಇಳಿಕೆಯಾಗಿತ್ತು.