ಉಡುಪಿ: ರಥಬೀದಿಯಲ್ಲಿರುವ ಶ್ರೀಕೃಷ್ಣ ಮಠದ ಮುಂಭಾಗದ ಕನಕದಾಸರ ಪ್ರತಿಮೆ ಹಾಗೂ ಗುಡಿಗೆ ಕನಕದಾಸ ಜಯಂತಿ ಪ್ರಯುಕ್ತ ವಿಶೇಷ ಪುಷ್ಪಾಲಂಕಾರ ನಡೆಸಿ ಪೂಜಿಸಲಾಯಿತು. ಕನಕದಾಸ ಜಯಂತಿ ಪ್ರಯುಕ್ತ ಶ್ರೀಮತಿ ಶ್ರೀಲತಾ ಜಿ.ಭಟ್ ಹಾಗೂ ಕುಮಾರಿ ವಸುಂದರಾ ಭಟ್ ಇವರಿಂದ “ಭಕ್ತ ಕನಕದಾಸ” ಹರಿಕಥೆ ನಡೆಯಿತು.