ಮಂಗಳೂರು: ಫಲಪುಷ್ಪ ಪ್ರದರ್ಶನ ಅಂದರೆ ಮಂಗಳೂರು ಜನತೆಗೆ ಹಬ್ಬ. ಪ್ರತೀ ವರ್ಷವೂ ಸಾವಿರಾರು ಪುಷ್ಪ ಮತ್ತು ಹಣ್ಣುಗಳು ಕುರಿತು ಆಸಕ್ತಿಯುಳ್ಳ ಜನರಿಗೆ ಫಲ ಪುಷ್ಪ ಪ್ರದರ್ಶನ ಅಂದರೆ ಎಲ್ಲಿಲ್ಲದ ಹಿಗ್ಗು. ಈ ವರ್ಷವೂ ಜನವರಿ 23-26 ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಫಲ ಪುಷ್ಪ ಪ್ರದರ್ಶನ ರಂಗೇಳಲಿದೆ. ವಿವಿಧ ಜಾತಿಯ ಹಣ್ಣುಗಳು, ಬಗೆ ಬಗೆಯ ಹೂಗಳು ಜನರನ್ನ ಕೈಬೀಸಿ ಕರೆಯಲಿವೆ. ಜೊತೆಗೆ ರೈತರು ಬೆಳೆದ ಹೊಸ ಬಗೆಯ ಹಣ್ಣುಗಳು, ಹೂ ಗಿಡಗಳು. ಕಲಾಕೃತಿಗಳು, ತರಕಾರಿ ಗಿಡಗಳು, ಸಾಂಬಾರು ಬೆಳೆಗಳು ಎಲ್ಲವೂ ಇಲ್ಲಿ ನೋಡಲು, ಖರೀದಿಸಲು ಸಿಗಲಿದೆ.
ಅಂದ ಹಾಗೆ ಈ ಕಾರ್ಯಕ್ರಮವನ್ನ ದ.ಕ.ಜಿಲ್ಲೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ ಹಾಗೂ ಮಂಗಳೂರಿನ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಿದೆ.
ಹಣ್ಣುಗಳು ಮತ್ತು ವೈವಿದ್ಯಮಯ ಪುಷ್ಪಲೋಕದೊಳಗೆ ಕರೆದೊಯ್ಯಲಿರುವ ಈ ಫಲ ಪುಷ್ಪ ಪ್ರದರ್ಶನದಲ್ಲಿ ಆಸಕ್ತಿಯಿದ್ದರೆ ನೀವೂ ಭಾಗವಹಿಸಬಹುದು.