ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ನಾಳೆ (ಜ. 13) ಸಂಜೆ 4 ಗಂಟೆಯೊಳಗೆ ನೂತನ ಸಚಿವರ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾಗುವವರಿಗೆ ಇಂದು ಸಂಜೆಯೊಳಗೆ ಮಾಹಿತಿ ನೀಡುತ್ತೇವೆ. ನಾಳೆ ಸಂಜೆ 4ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ಕಾರ ರಚನೆಯಲ್ಲಿ ನಿರ್ಣಯಕ ಪಾತ್ರ ನಿರ್ವಹಿಸಿದ ನೀಡಿದ ಎಂಟಿಬಿ ನಾಗರಾಜ್, ಆರ್. ಶಂಕರ್ ಹಾಗೂ ಮುನಿರತ್ನ ಅವರಿಗೆ ಮಂತ್ರಿ ಸ್ಥಾನ ಪಕ್ಕಾ ಆಗಿದ್ದು, ಉಳಿದಂತೆ ಬಿಜೆಪಿಯ ಹಿರಿಯ ನಾಯಕರಾದ ಸುಳ್ಯ ಶಾಸಕ ಎಸ್. ಅಂಗಾರ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹಾಗೂ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದೆ.
ಒಂದು ಸ್ಥಾನಕ್ಕಾಗಿ ಫೈಟ್
ಖಾಲಿ ಇರುವ ಏಳು ಸಚಿವ ಸ್ಥಾನದ ಪೈಕಿ ಆರು ಸ್ಥಾನ ಭರ್ತಿಯಾಗಿದ್ದು, ಒಂದು ಸ್ಥಾನಕ್ಕೆ ಅರವಿಂದ ಲಿಂಬಾವಳಿ ಹಾಗೂ ಎಂಎಲ್ ಸಿ ಸಿ.ಪಿ. ಯೋಗೀಶ್ವರ್ ಮಧ್ಯೆ ಪೈಪೋಟಿ ಇದೆ. ಕೊನೆ ಕ್ಷಣದಲ್ಲಿ ಇವರಿಬ್ಬರಲ್ಲಿ ಯಾರಿಗೆ ಮಂತ್ರಿಪಟ್ಟ ಸಿಗಲಿದೆ ಎಂಬುವುದನ್ನು ಕಾದುನೋಡಬೇಕಿದೆ.
ಹಾಗೆ ಸಂಪುಟದಿಂದ ಕೆಲವರನ್ನು ಕೈಬಿಡುತ್ತಾರೆ ಎಂಬ ಸುದ್ದಿಕೇಳಿಬಂದಿದ್ದು, ಯಾರನ್ನು ಸಂಪುಟದಿಂದ ಕೈಬಿಡುತ್ತಾರೆಂಬುವುದು ನಾಳೆಯೇ ತಿಳಿಯಲಿದೆ.