ಎ. 12ರಂದು ಪ್ರಥಮ ವರ್ಷದ ಹೊನಲು ಬೆಳಕಿನ ಜೋಡುಕರೆ ಗುರುಪುರ ಕಂಬಳ

ಗುರುಪುರ: ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್‌ ಮೂಳೂರು – ಅಡ್ಡೂರು ಪ್ರಥಮ ವರ್ಷದ ಹೊನಲು ಬೆಳಕಿನ ಜೋಡುಕರೆ ಕಂಬಳ ಎ. 12ರಂದು ಗುರುಪುರದ ಮಾಣಿಬೆಟ್ಟು ಗುತ್ತುವಿನಲ್ಲಿ ನಡೆಯಲಿದೆ.

ಬೆಳಗ್ಗೆ 8.30ಕ್ಕೆ ಉದ್ಘಾಟನೆ ನಡೆಯಲಿದ್ದು, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಉದ್ಘಾಟಿಸಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಆನುವಂಶಿಕ ಅರ್ಚಕ ಅನಂತ ಅಸ್ರಣ್ಣ ದೀಪ ಬೆಳಗಲಿದ್ದು, ಗುರುಪುರ ಪೊಂಪೈ ಚರ್ಚ್‌ನ ಧರ್ಮಗುರು ವಂ| ರೊಡಾಲ್ಫ್ ರವಿ ಡೆಸಾ, ಗುರುಪುರ ದಾರುಸಲಾಂ ಜುಮ್ಮಾ ಮಸೀದಿಯ ಖತೀಬರಾದ ಜಮಾಲ್‌ ದಾರಿಮಿ ಶುಭ ಸಂದೇಶ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.