ಮೊದಲ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ಅಡಿಲೇಡ್: ಆಸ್ಟ್ರೇಲಿಯಾ ತಂಡದ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡವು ಮೊದಲನೇ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ.

ದ್ವಿತೀಯ ಇನಿಂಗ್ಸ್ ನಲ್ಲಿ ಕೊಹ್ಲಿ ಪಡೆ 21.2 ಓವರ್‌ಗಳಿಗೆ ಕೇವಲ 36 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಆಸ್ಟ್ರೇಲಿಯಾ ತಂಡಕ್ಕೆ 90 ರನ್‌ ಗುರಿ ನೀಡಿತು. ಜಾಶ್‌ ಹೇಝಲ್‌ವುಡ್‌(8ಕ್ಕೆ5) ಹಾಗೂ ಪ್ಯಾಟ್‌ ಕಮಿನ್ಸ್ (24ಕ್ಕೆ 4 ) ಅವರ ಮಾರಕ ದಾಳಿ ನಡೆಸಿದರು.

ಮಯಾಂಕ್‌ ಅಗರ್ವಾಲ್‌ 9 ರನ್‌, ವಿರಾಟ್‌ ಕೊಹ್ಲಿ 4 ರನ್‌, ಪೃಥ್ವಿ ಶಾ 4 ರನ್ ‌ಗಳಿಸಿದರೆ‌, ಚೇತೇಶ್ವರ ಪೂಜಾರ ಹಾಗೂ ರಹಾನೆ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಹನುಮ ವಿಹಾರಿ 8 ಹಾಗೂ ವೃದ್ದಿಮಾನ್‌ ಸಹಾ 4 ರನ್‌ ಗಳಿಗೆ ಸೀಮಿತರಾದರು.
90 ರನ್‌ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ 21 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ 93 ರನ್‌ ಗಳಿಸಿ, 8 ವಿಕೆಟ್‌ಗಳ ಗೆಲುವಿನ ನಗೆ ಬೀರಿತು.

ಮ್ಯಾಥ್ಯೂ ವೇಡ್‌ 33 ರನ್‌ ಗಳಿಸಿ ಔಟಾದರೆ, ಜೋ ಬರ್ನ್ಸ್ ಅಜೇಯ 51 ರನ್‌ ಗಳಿಸಿ ತಂಡವನ್ನು ಬಹುಬೇಗ ಗೆಲುವಿನ ದಡ ಸೇರಿಸಿದರು. ಭಾರತದ ಪರ ಆರ್‌ ಅಶ್ವಿನ್‌ ಒಂದೇ ಒಂದು ವಿಕೆಟ್‌ ಕಬಳಿಸಿದರು.

ಸ್ಕೋರ್ ವಿವರ:
ಭಾರತ
ಪ್ರಥಮ ಇನಿಂಗ್ಸ್‌: 244/10 (93.1 ಓವರ್‌)
ವಿರಾಟ್‌ ಕೊಹ್ಲಿ-74
ಚೇತೇಶ್ವರ್ ಪೂಜಾರಾ-43
ಅಜಿಂಕ್ಯ ರಹಾನೆ-42
ಬೌಲಿಂಗ್‌: ಮಿಚೆಲ್‌ ಸ್ಟಾರ್ಕ್ 53ಕ್ಕೆ 4, ಪ್ಯಾಟ್‌ ಕಮಿನ್ಸ್ 48ಕ್ಕೆ 3, ಜಾಶ್‌ ಹೇಝಲ್‌ವುಡ್‌ 47ಕ್ಕೆ 1, ನೇಥನ್‌ ಲಯಾನ್‌ 68ಕ್ಕೆ 1.

ದ್ವಿತೀಯ ಇನಿಂಗ್ಸ್: 39/9 (ಡಿ) ( 21.2 ಓವರ್‌)
ಮಯಾಂಕ್‌ ಅಗರ್ವಾಲ್‌-9
ಹನುಮ ವಿಹಾರಿ-8
ವಿರಾಟ್‌ ಕೊಹ್ಲಿ-4
ಬೌಲಿಂಗ್‌: ಜಾಶ್‌ ಹೇಝಲ್‌ವುಡ್‌ 8ಕ್ಕೆ 5, ಪ್ಯಾಟ್‌ ಕಮಿನ್ಸ್ 21ಕ್ಕೆ 4

ಆಸ್ಟ್ರೇಲಿಯಾ
ಪ್ರಥಮ ಇನಿಂಗ್ಸ್‌: 191/10 (72.1)
ಟಿಮ್‌ ಪೇಯ್ನ್‌-73*
ಮಾರ್ನಸ್‌ ಲಾಬುಶೇನ್‌-47
ಬೌಲಿಂಗ್‌: ಆರ್‌ ಅಶ್ವಿನ್ 55ಕ್ಕೆ 4, ಉಮೇಶ್‌ ಯಾದವ್ 40ಕ್ಕೆ 3,‌ ಜಸ್‌ಪ್ರಿತ್‌ ಬುಮ್ರಾ 52ಕ್ಕೆ 2, ಮೊಹಮ್ಮದ್‌ ಶಮಿ 41ಕ್ಕೆ 0

ದ್ವಿತೀಯ ಇನಿಂಗ್ಸ್: 93/2 (21 ಓವರ್‌)
ಮ್ಯಾಥ್ಯೂ ವೇಡ್‌-33
ಜೋ ಬರ್ನ್ಸ್‌-51*
ಮಾರ್ನಸ್‌ ಲಾಬುಶೇನ್‌-6
ಸ್ಟೀವನ್‌ ಸ್ಮಿತ್‌-1*
ಬೌಲಿಂಗ್‌: ಆರ್‌ ಅಶ್ವಿನ್‌ 16ಕ್ಕೆ 1, ಜಸ್‌ಪ್ರಿತ್‌ ಬುಮ್ರಾ 27ಕ್ಕೆ 0, ಉಮೇಶ್‌ ಯಾದವ್‌ 49ಕ್ಕೆ 0