ಬೆಂಗಳೂರು: 2021-22 ಸಾಲಿನ ಪ್ರಥಮ ಪಿಯುಸಿ ಮಾ.28 ರಿಂದ ಎ.13 ರ ವರೆಗೆ ಪರೀಕ್ಷೆ ನಡೆಸುವಂತೆ ಪಿಯು ಇಲಾಖೆಯು ಸೂಚನೆ ನೀಡಿದೆ.
ಪಿಯು ಪರೀಕ್ಷೆಗಳನ್ನು ಅಪರಾಹ್ನ 2.30ರಿಂದ ಸಂಜೆ 5.45 ರ ವರೆಗೆ ಜಿಲ್ಲಾ ಹಂತದಲ್ಲಿಯೇ ನಡೆಸಬೇಕು.
ಕಾಲೇಜಿನ ಎಲ್ಲಾ ಪ್ರಾಂಶುಪಾಲರಿಗೆ ಪರೀಕ್ಷಾ ಪೂರ್ವ ಸಿದ್ಧತೆ ಕಾರ್ಯಗಳನ್ನು ವ್ಯವಸ್ಥಿತವಾಗಿ ಮಾಡುವಂತೆ ನಿರ್ದೇಶನ ನೀಡಲಾಗಿದೆ.
ಫಲಿತಾಂಶವನ್ನು ಎ.30 ರಂದು ಪ್ರಕಟಿಸಬೇಕು ಮತ್ತು ಅದೇ ದಿನ ಪೂರಕ ಪರೀಕ್ಷೆಗಳನ್ನು ನಡೆಸುವ ದಿನಾಂಕವನ್ನು ಪ್ರಕಟಿಸುವಂತೆ ಸೂಚಿಸಲಾಗಿದೆ.