ಉಡುಪಿ: ಇತಿಹಾಸ ಪ್ರಸಿದ್ದ, ಸುಮಾರು 1500 ವರ್ಷ ಇತಿಹಾಸವಿರುವ ಕಡಿಯಾಳಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ವಾಸ್ತುಕಲೆಯ ಅತ್ಯದ್ಭುತ ನಿದರ್ಶನವೊಂದು ಭಕ್ತಾದಿಗಳನ್ನು ಕೈ ಬೀಸಿ ಕರೆಯುತ್ತಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮರದಿಂದ ಮಾಡಿದ ತಿರುಗುವ ಮುಚ್ಚಿಗೆಯನ್ನು ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ನಿರ್ಮಾಣ ಮಾಡಲಾಗಿದೆ.
ಜೂನ್ 1 ರಿಂದ ಜೂನ್ 10ರ ತನಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಜರುಗಲಿದ್ದು, ಈ ತಿರುಗುವ ಮುಚ್ಚಿಗೆಯು ಅತಿ ದೊಡ್ಡ ಆಕರ್ಷಣೆಯಾಗಲಿದೆ.












