ಮೊದಲ ನೋಟ : ಮಂಜುಳಾ. ಜಿ. ತೆಕ್ಕಟ್ಟೆ ಬರೆದ ಪುಟ್ಟ ಕತೆ

♦ ಮಂಜುಳಾ . ಜಿ . ತೆಕ್ಕಟ್ಟೆ

ಕಂಪನಿ ಉದ್ಯೋಗಿ ಒಬ್ಬ ಎಂದಿನಂತೆ ಈ ಸಂಜೆ ಕೂಡ ಚಹಾ ಕುಡಿಯಲೆಂದು ಸ್ನೇಹಿತರೊಂದಿಗೆ ರಸ್ತೆಯೆ ಪಕ್ಕದ ಅಂಗಡಿಗೆ ಹೋಗುತ್ತಾರೆ. ಚಹಾ ಕುಡಿಯುತ್ತ ಹರಟೆ ಹೊಡೆಯಲು ಇವರೆಲ್ಲರ ಗಮನ ಅಲ್ಲೇ ರಸ್ತೆಯ ಹತ್ತಿರ ನಿಂತಿದ್ದ ಹುಡುಗನ ಕಡೆ  ಹೋಗುತ್ತದೆ. ಆ ಹುಡುಗನ ಮೈ ಬಟ್ಟೆಯೆಲ್ಲ ಕೊಳೆ, ತಲೆ ಬಾಚಣಿಗೆ ಕಾಣದೆ ಎಷ್ಟೋ ದಿನವಾದಂತಿತ್ತು, ದೇಹ ಕೃಶವಾಗಿತ್ತು, ಹೊಟ್ಟೆಗೆ ಊಟವಿಲ್ಲದೆ ಎಷ್ಟೋ ದಿನವಾದಂತೆ ಇತ್ತು.

ಚಿಕ್ಕಂದಿನಿಂದ ಶ್ರೀಮಂತಿಕೆಯಲ್ಲಿ ಬೆಳೆದ ಈ ಕಂಪನಿ ಉದ್ಯೋಗಿ ಹಾಗೂ ಅವನ ಸ್ನೇಹಿತರು ತಮ್ಮ ಮೊದಲ ನೋಟಕ್ಕೆ ಆ ಹುಡುಗನ ಮೇಲೆ ಕನಿಕರಕ್ಕೆ ಬದಲು ಅಸಹ್ಯ ಪಟ್ಟರು. ತಕ್ಷಣಕ್ಕೆ ರಸ್ತೆಯಲ್ಲಿ ಜೋರಾಗಿ ಸದ್ದಾಗುವಾಗ ಎಲ್ಲರ ಗಮನ ಆ ಕಡೆ ತಿರುಗಿತು. ಜನ ಕಿಕ್ಕಿರಿದರು. ಈ ಸ್ನೇಹಿತರೆಲ್ಲ ಓಡಿ ಹೋಗಿ ನೋಡಲು, ವಾಹನ ಅಪಘಾತವಾಗಿ ಬೈಕಿಂದ ಗಂಡ ಹೆಂಡತಿ ಬಿದ್ದಿದ್ದರು. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು . ಒಮ್ಮೆಲೇ ಆ ಬಿದ್ದ ಹೆಂಗಸು ನೋವಿನಲ್ಲಿ ನನ್ನ ಮಗು!!ಎಂದು ಗಾಬರಿಗೊಳ್ಳಲು ಎಲ್ಲರೂ ದಂಗಾದರು.ಏಕೆಂದರೆ
ಇವರ ಜೊತೆ ಮಗು ಇದಿದ್ದೆ ಗೊತ್ತಾಗಿರಲಿಲ್ಲ ಯಾರಿಗೂ.

ಆಗಲೇ ಆ ಜನಗಳ ಮಧ್ಯದಿಂದ ಬಂದ ಆ ಕೊಳಕು ಬಟ್ಟೆಯ ಹುಡುಗ ಆ ಮಗುವನ್ನು ಎತ್ತಿ ತೋರಿಸುತ್ತಾ, ಆ ತಾಯಿಯ ಕೈಗೆ ಕೊಡಲು ಆ ತಾಯಿ, ನೋವು ಗಾಬರಿ ತುಂಬಿದ ಖುಷಿಯಲ್ಲಿ ಆ ಹುಡುಗ ತಲೆ ನೇವರಿಸಿದಳು. .ಆ ಹುಡುಗನ ಸ್ಥಿತಿ ಕಂಡ ಆ ಮಗುವಿನ ತಂದೆ ತನ್ನ ಪರ್ಸಿನಿಂದ ಹಣ ತೆಗೆದು ಕೈಗೆ ಕೊಡುತ್ತಾನೆ.

ಆ ಮಗು ಉರುಳಿದ್ದರಿಂದ ರಸ್ತೆಯ ಇಕ್ಕೆಲಕ್ಕೆ ಬಂದಿತ್ತು, ಅಲ್ಲೇ ಇದ್ದ ಹುಡುಗ ಆ ಮಗುವನ್ನ ತಕ್ಷಣಕ್ಕೆ ಎತ್ತಿ  ಬಚಾವ್ ಮಾಡಿದ್ದ. ಆದರೆ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ರಸ್ತೆಯ ಈ ಮನಕಲುಕುವ ದೃಶ್ಯಕ್ಕೆ ಎಲ್ಲರೂ ಸಾಕ್ಷಿಯಾಗಿದ್ದರು. ಆ ಕಂಪನಿ ಉದ್ಯೋಗಿ ಹಾಗು ಅವನ ಸ್ನೇಹಿತರು ಅಸಹ್ಯ ಎಂದು ಭಾವಿಸಿದ ಆ ಹುಡುಗ, ಆ ಗಂಡ ಹೆಂಡತಿ ಪಾಲಿಗೆ ಮೊದಲ ನೋಟಕ್ಕೆ ದೇವರಂತೆ ಕಂಡಿದ್ದ. ಈ ಕ್ಷಣಕ್ಕೆ ಅವರೆಲ್ಲ ತಲೆ ಬಾಗಿದರು.

ಈ ಕತೆಯ ನೀತಿಯಿಷ್ಟೇ, ವೇಷಭೂಷಣ ಹೇಗೂ ಇರಲಿ!! ಕರ್ತವ್ಯ, ಸಹಾಯ ಮಾಡುವ ಮನೋಭಾವ ಮುಖ್ಯ. ತನ್ನನ್ನು ತಾನು ನಿರ್ಲಕ್ಷಿಸುತಿದ್ದರೂ ಜಗತ್ತನ್ನು ನಿರ್ಲಕ್ಷಿಸದೇ ಸದಾ ಇನ್ನೊಬ್ಬರಿಗೆ ಒಳಿತನ್ನು ಮಾಡುತ್ತ ಸಾಗುತ್ತಿರುವ ಹಲವರಿದ್ದಾರೆ . ಈ ಕಥೆಯಲ್ಲಿ ಆ ಹುಡುಗ ತನ್ನ ಮೊದಲ ನೋಟದಲ್ಲಿ ಕಂಪನಿ ಉದ್ಯೋಗಿ ಹಾಗು ಅವನ ಸ್ನೇಹಿತರಿಗೆ ಕಂಡ ರೀತಿಗೂ, ಆ ಗಂಡ ಹೆಂಡತಿಗೆ ಮೊದಲ ನೋಟಕ್ಕೆ ಕಂಡ ರೀತಿಗೂ ಎಷ್ಟೊಂದು ವ್ಯತ್ಯಾಸವಿದೆ ನೋಡಿ.

ಮಂಜುಳಾ ವಿ ತೆಕ್ಕಟ್ಟೆ