HAL ನಲ್ಲಿ ತಯಾರಾದ ಸ್ವದೇಶೀ ನಿರ್ಮಿತ ತೇಜಸ್- ಮಾರ್ಕ್ 1A ಯುದ್ಧ ವಿಮಾನದ ಮೊದಲ ಹಾರಾಟ ಯಶಸ್ವಿ

ಬೆಂಗಳೂರು: ಭಾರತದಲ್ಲಿ ತಯಾರಿಸಿದ ಸ್ಥಳೀಯ LCA ಮಾರ್ಕ್ 1A ಯುದ್ಧ ವಿಮಾನದ ಮೊದಲ ಹಾರಾಟವನ್ನು ಇಂದು ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಪೂರ್ಣಗೊಳಿಸಿದೆ. ಮೊದಲ ಹಾರಾಟದ ಸಮಯದಲ್ಲಿ ವಿಮಾನವು 15 ನಿಮಿಷಗಳ ಕಾಲ ಗಾಳಿಯಲ್ಲಿ ಹಾರಾಟ ನಡೆಸಿದೆ ಎಂದು HAL ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಿಯಾ ಟುಡೇ ವರದಿಯ ಪ್ರಕಾರ, ಪಾಕಿಸ್ತಾನದ ಗಡಿಯ ಸಮೀಪವಿರುವ ರಾಜಸ್ಥಾನದ ಬಿಕಾನೇರ್‌ನಲ್ಲಿರುವ ನಲ್ ವಾಯುನೆಲೆಯಲ್ಲಿ ಯುದ್ಧ ವಿಮಾನವನ್ನು ನಿಯೋಜಿಸುವ ಸಾಧ್ಯತೆಯಿದೆ. ವಿಮಾನದ ಮೊದಲ ಸ್ಕ್ವಾಡ್ರನ್ ಅನ್ನು ನಲ್ ವಾಯುನೆಲೆಯಲ್ಲಿ ನಿಯೋಜಿಸಲು ಯೋಜಿಸಲಾಗಿದೆ.