ಕಾರ್ಕಳ: ಕಾರ್ಕಳ ಪುರಸಭೆಯ ವತಿಯಿಂದ 2021-22 ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಶೇ.24.10 ರ ಅನುದಾನದಡಿ ಅನುಸೂಚಿತ ಜಾತಿಯವರ ಮನೆ ಮೇಲ್ಛಾವಣಿ ದುರಸ್ಥಿ, ಸ್ವ-ಉದ್ಯೋಗಕ್ಕೆ ಸಹಾಯಧನ, ಮನೆ ನಿರ್ಮಾಣಕ್ಕೆ ಸಹಾಯಧನ, ಆರೋಗ್ಯ ವೈದ್ಯಕೀಯ ವೆಚ್ಚ, ರಸ್ತೆ ಅಪಘಾತ, ಶಸ್ತ್ರ ಚಿಕಿತ್ಸೆಗಾಗಿ ವೈದ್ಯಕೀಯ ಸಹಾಯಧನ ಹಾಗೂ ಸಣ್ಣ ಉದ್ದಿಮೆ ಮಾಡುವ ಫಲಾನುಭವಿಗಳಿಗೆ ಸಹಾಯಧನ, ಶೇ. 7.25 ರ ಅನುದಾನದಡಿ ಇತರೆ ಬಡಜನರ ಕಲ್ಯಾಣಾಭಿವೃದ್ಧಿಗಾಗಿ ಮನೆ ಮೇಲ್ಛಾವಣಿ ದುರಸ್ಥಿ, ಆರೋಗ್ಯ ವೈದ್ಯಕೀಯ ವೆಚ್ಚಕ್ಕೆ ಸಹಾಯಧನ ಹಾಗೂ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ಮತ್ತು ಶೇ. 5 ರ ಅನುದಾನದಡಿ ವಿಕಲಚೇತನರಿಗೆ ಆರೋಗ್ಯ ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ, ಸಾಧನಾ ಸಲಕರಣೆ ವಿತರಣೆ, ಮನೆ ದುರಸ್ಥಿಗೆ ಸಹಾಯಧನ, ಸ್ವ-ಉದ್ಯೋಗಕ್ಕೆ ಸಬ್ಸಿಡಿ ಸಹಾಯಧನ ಹಾಗೂ ಅಪಘಾತ ಅಂಗವೈಕಲ್ಯ ಉಂಟಾದಲ್ಲಿ ಶಸ್ತ್ರಚಿಕಿತ್ಸೆಗಾಗಿ ಸಹಾಯಧನ ವಿತರಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ನವೆಂಬರ್ 14 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಾರ್ಕಳ ಪುರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.