ಕ್ಯಾನ್ಸರ್ ಪೀಡಿತನ ಚಿಕಿತ್ಸೆಗೆ ಧನಸಹಾಯ

ಉಡುಪಿ: ಇಲ್ಲಿನ ಬನ್ನಂಜೆಯ ಶೈಲೇಶ್ ಎಂಬವರು ರಕ್ತ ಕ್ಯಾನ್ಸರ್ ಪೀಡಿತರಾಗಿದ್ದು, ಇವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅವಶ್ಯಕತೆ ಇದ್ದು, ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದ ಇವರಿಗೆ, ಬನ್ನಂಜೆಯ
ಲಕ್ಷ್ಮೀನಾರಾಯಣ ಚಂಡೆ ವಾದ್ಯ ಬಳಗದ ಸಹಯೋಗದೊಂದಿಗೆ, ವಾಸುದೇವ ಬನ್ನಂಜೆ ಇವರ ನೇತೃತ್ವದಲ್ಲಿ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದಾನಿಗಳಿಂದ ಪಡೆದ ಹಣವನ್ನು ಹಸ್ತಾಂತರಿಸಲಾಯಿತು.

ಕಚ್ಚೂರು ಮಾಲ್ತಿದೇವಿ ಹಾಗೂ ಬಬ್ಬು ಸ್ವಾಮಿ ಮೂಲ ಕ್ಷೇತ್ರ ಧರ್ಮಶ್ರೀಯಾದ ಗೋಕುಲದಾಸ್ ಬಾರಕೂರು ಹಾಗೂ ಕಡಿಯಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಕಿಣಿ ಇವರು ಶೈಲೇಶ್ ಅವರಿಗೆ ಹಣವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾಜಿ ನಗರ ಸಭಾ ಸದಸ್ಯ ಹರೀಶ್ ರಾಂ ಬನ್ನಂಜೆ, ಆನಂದ ಶಿರಿಬೀಡು, ತಂಡದ ಸದಸ್ಯರು, ಊರಿನ ನಗರಿಕರು ಉಪಸ್ಥಿತರಿದ್ದರು.