ಮಂಗಳೂರು ಗಾಂಟ್ ಟ್ಯಾಲೆಂಟ್ ಸೀಸನ್ 3: ಸಂಭ್ರಮದ ಗ್ರ್ಯಾಂಡ್ ಫಿನಾಲೆ; ಮಿಂಚಿದ ಸ್ಪರ್ಧಿಗಳು

ಮಂಗಳೂರು: 200+ ಕ್ಕೂ ಹೆಚ್ಚು ಆಡಿಷನ್ ಎಂಟ್ರಿಗಳೊಂದಿಗೆ, ಮ್ಯಾಂಗಲೋರ್ ಗಾಟ್ ಟ್ಯಾಲೆಂಟ್- ಸೀಸನ್ 3 ನಲ್ಲಿ ಹಲವು ಸುತ್ತುಗಳ ಬಳಿಕ ಟಾಪ್ 29 ಫೈನಲಿಸ್ಟ್‌ಗಳನ್ನು ಆಯ್ಕೆ ಮಾಡಲಾಗಿತ್ತು.

ಗ್ರ್ಯಾಂಡ್ ಫಿನಾಲೆಗೆ ಫೈನಲಿಸ್ಟ್ ಗಳನ್ನು ಆಯ್ಕೆ ಮಾಡುವ ಕಾರ್ಯಕ್ರಮವನ್ನು ನಗರದ ಡ್ರೀಮ್ ಕ್ಯಾಚರ್ಸ್ ಈವೆಂಟ್‌ಗಳ ಸಂಸ್ಥಾಪಕಿ ಪೃಥ್ವಿ ಗಣೇಶ್ ಕಾಮತ್ ನೇತೃತವದಲ್ಲಿ ಆಯೋಜಿಸಲಾಗಿತ್ತು.

ನೆಕ್ಸಸ್ ಮಾಲ್‌ ನ ಫಿಜಾದಲ್ಲಿ ಈ ಗ್ರ್ಯಾಂಡ್ ಫಿನಾಲೆಯ ಅದ್ದೂರಿ ಈವೆಂಟ್ ಜರುಗಿತು. ನಗರದ ಖ್ಯಾತ ನಿರೂಪಕರಾದ ವಿಜೆ ಡಿಕ್ಸನ್ ಮತ್ತು ನಿಖಿಲ್ ಶೆಟ್ಟಿ ನಿರೂಪಣೆ ಕಳೆನೀಡಿತು.

ಖ್ಯಾತರಾದ ಗುರುಪ್ರಸಾದ್ ರಾವ್, ಶುಭಕಿರಣ್ ಮಣಿ, ಸೂರಜ್ ಸನಿಲ್, ವಿಜೇತ ಪೂಜಾರಿ ಮತ್ತು ಗೌತಮ್ ಪದ್ಮಶಾಲಿ ತೀರ್ಪುಗಾರರಾಗಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಶೀರ್ಷಿಕೆ ಪ್ರಾಯೋಜಕರಾದ ಗಣೇಶ್ ಕಾಮತ್, ಬಾನ್ ಮಸಾಲಾ ತಂಡದ ಜೋಸೆಫ್ ಡಿಸಿಲ್ವಾ, ಮರಿಯೆಟ್ ಡಿಸಿಲ್ವಾ ಮತ್ತು ರೆನಿಶಾ ಡಿಸಿಲ್ವಾ, ಮುಖ್ಯ ಪ್ರಾಯೋಜಕರಾದ ಶರತ್ ಟೋನಿ ಎಂಡ್ ಗೈ ಬಿಜೈ, ಸಹ ಪ್ರಾಯೋಜಕರಾದ ಎನೋಚ್ ರೆನಾಲ್ಟ್ ತಂಡದಿಂದ ಮಾಧುರಿ, ಪವರ್‌ಹೌಸ್ ಶರಣ್ ಚಿಲಿಂಬಿ ಮತ್ತು ಟೀಮ್ ಫಿಜಾ ನೆಕ್ಸಸ್ ಮಾಲ್ ಉಪಸ್ಥಿತರಿದ್ದರು.

ಸಿಜ್ಲಿಂಗ್ ಗೈಸ್ ಡ್ಯಾನ್ಸ್ ತಂಡದ ಗ್ರ್ಯಾಂಡ್ ಎಂಟ್ರಿ ಡ್ಯಾನ್ಸ್ ಜೊತೆಗೆ ಸಂಘಟಕರು, ತೀರ್ಪುಗಾರರು, ಗಣ್ಯರು ಆಗಮಿಸಿದರು. ರಿಯಾ ಫೌಂಡೇಶನ್‌ನ ತಾರೆಯರು, ಮಾಸ್ಟರ್ ಶೌರ್ಯ ರಾವ್, ಟೀಮ್ ಡ್ಯಾನ್ಸ್ ಸ್ಟಾರ್ಸ್ ಕ್ರ್ಯೂ ನ ಪುಟಾಣಿಗಳು ಮತ್ತು ಉಪಾಸನಾ ಟೀಮ್‌ನ ಮಹಿಳೆಯರಿಂದ ಹೃದಯಸ್ಪರ್ಶಿ ನೃತ್ಯ ಪ್ರದರ್ಶನ ಏರ್ಪಟ್ಟಿತು.

ಚೇತನಾ ಅವರ ಬ್ಯೂಟಿ ಲೌಂಜ್ ನಿಂದ ಸಾಲಂಕೃತರಾದ ಸ್ಪರ್ಧಿಗಳು ಮಿಂಚಿದರು.

ಎಲ್ಲಾ ಪ್ರಾಯೋಜಕರು ಮತ್ತು ಬೆಂಬಲಿಗರ ಭಾಗವಹಿಸುವಿಕೆಯೊಂದಿಗೆ ಈವೆಂಟ್ ದೊಡ್ಡ ಯಶಸ್ಸನ್ನು ಕಂಡಿತು.

ವಿಜೇತ ತಂಡ – ಟೀಂ ಕ್ಲಾನ್,
ಮೊದಲ ರನ್ನರ್ ಅಪ್- ಟೀಂ ವಿಶ್ವಕರ್ಮ
ಎರಡನೇ ರನ್ನರ್ ಅಪ್- ಅನಘಾ ಕೆ.
ಸಮಾಧಾನಕರ ಬಹುಮಾನ ವಿಜೇತ- ರಿಯಾ ಚಂದ್ರ
ಸಮಾಧಾನಕರ ಬಹುಮಾನ ವಿಜೇತ- ಅಖಿಲ್ ಭಂಡಾರಿ
ಸಮಾಧಾನಕರ ಬಹುಮಾನ ವಿಜೇತ ತಂಡ- ಝಂಕಾರ್ ಕಥಕ್ ನೃತ್ಯ ತಂಡ