ಭುವನೇಶ್ವರ (ಒಡಿಶಾ): ಕಳೆದ ವರ್ಷ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್‌ನ ಯಶಸ್ವಿ ಆತಿಥ್ಯದ ನಂತರ, ಒಡಿಶಾದ ಕಳಿಂಗ ಸ್ಟೇಡಿಯಂ ಮತ್ತು ಗುವಾಹಟಿಯ ಕ್ರೀಡಾಂಗಣ 2026ರ ಫಿಫಾ ವಿಶ್ವಕಪ್‌ನ ಎರಡು ಅರ್ಹತಾ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಕಳೆದ ವರ್ಷ ಫಿಫಾ ಅಂಡರ್ 17 ಮಹಿಳಾ ವಿಶ್ವಕಪ್‌ನ ಪಂದ್ಯಗಳನ್ನು ಯಶಸ್ವಿಯಾಗಿ ನಡೆಸಿದ ಭಾರತಕ್ಕೆ ಮುಂದಿನ ವಿಶ್ವಕಪ್‌ನ ಅರ್ಹತಾ ಮ್ಯಾಚ್ನ ಆತಿಥ್ಯದ ಜವಾಬ್ದಾರಿ ಸಿಕ್ಕಿದೆ.
2026ರ ಫಿಫಾ ವಿಶ್ವಕಪ್ ಮತ್ತು ಎಎಫ್ಸಿ ಏಷ್ಯನ್ ಕಪ್ 2027 ರ ಅರ್ಹತೆಗೆ ಜಂಟಿಯಾಗಿ ಪಂದ್ಯವನ್ನು ನಡೆಸಲಾಗುತ್ತಿದೆ. ಈ ಅರ್ಹತಾ ಪಂದ್ಯಗಳ ಎರಡು ಮ್ಯಾಚ್ ಭಾರತದಲ್ಲಿನ ಭುವನೇಶ್ವರ ಮತ್ತು ಗುವಾಹಟಿಯಲ್ಲಿ ನಡೆಯಲಿವೆ. ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ತಮ್ಮ ಹಕ್ಕನ್ನು ಮಂಡಿಸುವಲ್ಲಿ ಯಶಸ್ವಿಯಾಗಿದೆ.ಅಮೆರಿಕಾ, ಮೆಕ್ಸಿಕೋ ಮತ್ತು ಕೆನಡಾದ ಜೊತೆಗೆ ಭಾರತವೂ ಆತಿಥ್ಯ ವಹಿಸುವ ರಾಷ್ಟ್ರವಾಗಿದೆ.
ಭಾರತ ತಂಡ ಎಎಫ್ಸಿ ಏಷ್ಯನ್ ಕಪ್ 2027ನ ಅರ್ಹತಾ ತಂಡಗಳ ಎ ಗುಂಪಿನಲ್ಲಿದೆ. ಕತಾರ್, ಕುವೈತ್, ಅಫ್ಘಾನಿಸ್ತಾನ ಮತ್ತು ಮಂಗೋಲಿಯಾ ಎ ಗುಂಪಿನಲ್ಲಿರುವ ಇತರೆ ತಂಡಗಳು. ಎಎಫ್ಸಿ ಏಷ್ಯನ್ ಕಪ್ ಚಾಂಪಿಯನ್ನ ಅರ್ಹತಾ ಪಂದ್ಯವನ್ನು ಭಾರತ ತಂಡ ಕುವೈತ್ನಲ್ಲಿ ನವೆಂಬರ್ 16 ರಂದು ಆಡಲದೆ. ಇದು ಭಾರತಕ್ಕೆ ಮೊದಲ ಪಂದ್ಯವಾಗಿದೆ. ನವೆಂಬರ್ 21 ರಂದು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ಆಯೋಜನೆ ಆಗಲಿದೆ.
ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಶಾಜಿ ಪ್ರಭಾಕರನ್ ಅವರು ಒಡಿಶಾ ಮತ್ತು ಅಸ್ಸೋಂ ಫುಟ್‌ಬಾಲ್ ಅಸೋಸಿಯೇಷನ್‌ಗಳು ಹೋಸ್ಟಿಂಗ್ ಹಕ್ಕುಗಳನ್ನು ಯಶಸ್ವಿಯಾಗಿ ಬಿಡ್ ಮಾಡಿದ್ದಕ್ಕಾಗಿ ಅಭಿನಂದಿಸಿದ್ದಾರೆ. “ಪಂದ್ಯಗಳ ಆತಿಥ್ಯದ ಹಕ್ಕುಗಳನ್ನು ಯಶಸ್ವಿಯಾಗಿ ಬಿಡ್ ಮಾಡಿದ ಒಡಿಶಾ ಫುಟ್ಬಾಲ್ ಅಸೋಸಿಯೇಷನ್ ಮತ್ತು ಅಸ್ಸೋಂ ಫುಟ್ಬಾಲ್ ಅಸೋಸಿಯೇಷನ್ನಿಂದ ಅಭಿನಂದಿಸಲು ಬಯಸುತ್ತೇವೆ ಮತ್ತು ಆಯಾ ರಾಜ್ಯ ಸರ್ಕಾರಗಳ ಬೆಂಬಲದೊಂದಿಗೆ ವಿಶ್ವ ದರ್ಜೆಯ ಮಟ್ಟದಲ್ಲಿ ಈ ಪಂದ್ಯದ ಯಶಸ್ಸನ್ನು ತಲುಪಿಸಲು ಬಯಸುತ್ತೇವೆ” ಎಂದಿದ್ದಾರೆ.
ಮುಂದಿನ ವರ್ಷ, ಭಾರತವು ಅಫ್ಘಾನಿಸ್ತಾನ ಅಥವಾ ಮಂಗೋಲಿಯಾ ವಿರುದ್ಧ ಬ್ಯಾಕ್-ಟು-ಬ್ಯಾಕ್ ಪಂದ್ಯಗಳನ್ನು ಆಡುತ್ತದೆ. ಮಾರ್ಚ್ 21, 2024 ರಿಂದ ಎಲಿಮಿನೇಟ್ ಪಂದ್ಯಗಳು ಆರಂಭ ಆಗಲಿದೆ, ಮಾರ್ಚ್ 26, 2024 ರಂದು ಪಂದ್ಯ ಗುವಾಹಟಿಯ ಇಂದಿರಾ ಗಾಂಧಿ ಕ್ರೀಡಾಂಗಣಕ್ಕೆ ಎರಡನೇ ಲೀಗ್ ಪಂದ್ಯ ನಡೆಯಲಿದೆ. ಜೂನ್ 6, 2024 ರಂದು ಕುವೈತ್ ವಿರುದ್ಧದ ಭಾರತ ತವರಿನಲ್ಲಿ ಪಂದ್ಯವನ್ನು ಆಡಲಿದೆ.