ಮಂಗಳೂರು: ತ್ರಿಶಾ ಕ್ಲಾಸಸ್ ನಲ್ಲಿ ತರಬೇತಿ ಪಡೆದು ಕಳೆದ ಜೂನ್ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಂಗಳೂರಿನ ತ್ರಿಶಾ ಕಾಲೇಜಿನ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರೊ. ಜಯ್ ಪ್ರಭುಲಾಲ್ ಶಾ ಅವರು ಯೋಜನೆಯುತವಾದ ಕಲಿಕೆ ಮತ್ತು ಆಸಕ್ತಿ ವಿದ್ಯಾರ್ಥಿಯನ್ನು ತನ್ನ ಗುರಿಯತ್ತ ಸಾಗಲು ಸಹಾಯಮಾಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 36 ವಿದ್ಯಾರ್ಥಿಗಳನ್ನು ಪೋಷಕರ ಸಮ್ಮುಖದಲ್ಲಿ ಅಭಿನಂದನಾ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ತ್ರಿಶಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಿರೀಶ್ ಮಾಡ್ಲಾ, ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ
ಪ್ರೊ. ಸುಪ್ರಭಾ ಅಂಚನ್, ತ್ರಿಶಾ ಕ್ಲಾಸಸ್ನ ಮಂಗಳೂರು ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಯಶಸ್ವಿನಿ ಯಶ್ಪಾಲ್ ಅವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಧನ್ಯಶ್ರೀ ನಿರೂಪಿಸಿದರು. ಶನಲ್ ಡಿಸೋಜಾ಼ ವಂದಿಸಿದರು. ಕೃತಿಕ ರೈ ಸ್ವಾಗತಿಸಿದರು.