79 ನೇ ಸ್ವಾತಂತ್ರ್ಯೋತ್ಸವ ಸಮಾರಂಭ ಕು| ಸನ್ನಿಧಿ ಕಶೆಕೋಡಿ,ದಿವಾಕರ ಬಿ ಶೆಟ್ಟಿ ಇವರಿಗೆ ಸನ್ಮಾನ

79 ನೇ ಸ್ವಾತಂತ್ರ್ಯೋತ್ಸವ ಸಮಾರಂಭ ಕು| ಸನ್ನಿಧಿ ಕಶೆಕೋಡಿ,ದಿವಾಕರ ಬಿ ಶೆಟ್ಟಿ ಇವರಿಗೆ ಸನ್ಮಾನ. ಕಳತ್ತೂರು ಕುಶಲ ಶೇಖರ ಶೆಟ್ಟಿ ಇಂಟರ್ನ್ಯಾಷನಲ್ ಆಡಿಟೋರಿಯಂ ಮತ್ತು ಕುಶಲಶೇಖರ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಸಮಾರಂಭ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮವು ಆಗಸ್ಟ್ 15 /8/ 2026 ನೇ ಶನಿವಾರ ಮಧ್ಯಾಹ್ನ 4 ಗಂಟೆಗೆ ಕುಶಲ ಶೇಖರ ಬಿ ಶೆಟ್ಟಿ ಆಡಿಟೋರಿಯಂ ನಲ್ಲಿ ಕೇಮಾರು ಶ್ರೀ ಶ್ರೀ ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಕೇಮಾರು, ಇವರ ಆಶೀರ್ವಚನ ದೊಂದಿಗೆ ಕುಶಲ ಶೇಖರ್ ಬಿ ಶೆಟ್ಟಿ ಆಡಿಟೋರಿಯಂ ಆಡಳಿತ ನಿರ್ದೇಶಕ ಶೇಖರ್ ಬಿ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ನೆರವೇರಿಸಲಿದ್ದಾರೆ. ಕಾಪುವಿನ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಸಾಯಿ ರಾಧಾ ಗ್ರೂಪ್ ಆಡಳಿತ ನಿರ್ದೇಶಕ ಮನೋಹರ್ ಎಸ್ ಶೆಟ್ಟಿ ಕಾಪು ಮಹಿಳಾ ಮಂಡಲ ಹಾಗೂ ಬಂಟರ ಮಹಿಳಾ ಮಂಡಲದ ಅಧ್ಯಕ್ಷರು ಆದ ಜಯಲಕ್ಷ್ಮಿ ಎಸ್ ಶೆಟ್ಟಿ, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಶಿರ್ವಾದ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಮರಮದ, ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ನಿವೃತ್ತ ಅಂಚೆ ಹಿರಿಯ ಅಧಿಕ್ಷಕ ನವೀನ್ ಚಂದರ್,ಕುತ್ಯಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ , ರಾಜೇಶ್ ಶೆಣೈ, ಭಾಗವಹಿಸಲಿದ್ದಾರೆ ಈ ಸಂದರ್ಭದಲ್ಲಿ ನಾಲ್ಕು ರಾಜ್ಯಗಳಲ್ಲಿ ಆರು ಭಾಷೆಗಳಲ್ಲಿ ಮತದಾನ ಜಾಗೃತಿ ಮೂಡಿಸಿದ ಬಾಲಕಿ ಕು|ಸನ್ನಿಧಿ ಕಶೆಕೋಡಿ ಕಾಪುವಿನ ಕಳತ್ತೂರು ಸಮಾಜ ಸೇವಕ ಗ್ರಾಮೀಣ ಅಂಚೆ ನೌಕರರ ಸಂಘ ಜಿಲ್ಲಾಧ್ಯಕ್ಷ ದಿವಾಕರ ಬಿ ಶೆಟ್ಟಿ ಇವರನ್ನು ಕೂಡ ಸನ್ಮಾನಿಸಲಾಗುವುದು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶಾಲೆಯಲ್ಲಿ ಪ್ರಥಮ ಬಂದ ಎಲ್ಲಾ ಪರಿಸರದ ಶಾಲಾ ಕಾಲೇಜು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸ್ಕಾಲರ್ಶಿಪ್ ನೀಡಿ ಗೌರವಿಸಲಾಗುವುದು.
ಗ್ರಾವಿಟಿ ಡ್ಯಾನ್ಸ್ ಗ್ರೂಪ್ ಕಾಪು ಇವರಿಂದ ಹಾಗೂ ಸ್ಥಳೀಯ ರಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮವಿದೆ ಕಾರ್ಯಕ್ರಮವು ಕರಂದಾಡಿ ನಿವೃತ್ತ ಮುಖ್ಯೋಪಾಧ್ಯಯರಾದ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಎಂದು ಕುಶಲ ಶೇಖರ್ ಬಿ ಶೆಟ್ಟಿ ಚಾರಿಟೇಬಲ್ ಅಧ್ಯಕ್ಷ ಕುಶಲ ಶೇಖರ್ ಬಿ ಶೆಟ್ಟಿ ಹಾಗೂ ಎಲ್ಲ ಸದಸ್ಯರು ತಿಳಿಸಿದ್ದಾರೆ