ಫೆ.26,27,28: ಜಿಲ್ಲೆಯಲ್ಲಿ ಇಂಧನ ಸಚಿವರ ಪ್ರವಾಸ

ಉಡುಪಿ, ಫೆಬ್ರವರಿ 25: ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಅವರು ಫೆಬ್ರವರಿ 26, 27 ಮತ್ತು 28 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಫೆ.26 ರಂದು ಸಂಜೆ 4 ಗಂಟೆಗೆ ಮುಂಡ್ಕೂರು ಕಜೆ-ಮಹಮ್ಮಾಯಿ ದೇವಸ್ಥಾನದ ಸಭಾಭವನ ಉದ್ಘಾಟನಾ ಕಾರ್ಯಕ್ರಮ, 5.30 ಕ್ಕೆ ಕುಕ್ಕುಂದೂರು ಗಣಿತ ನಗರದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಇದರ ಫೌಂಡರ್ಸ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.

ಫೆ.27 ರಂದು ಬೆಳಗ್ಗೆ 6.30 ಕ್ಕೆ ಕಾರ್ಕಳ ದಾನಶಾಲೆಯಲ್ಲಿ ದಾನಶಾಲೆ ಶಿವಭಕ್ತ ಭಜನಾ ಮಂಡಳಿ ಏಕಾಹ ಭಜನೆಗೆ ಚಾಲನೆ, 8 ಕ್ಕೆ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ, 9.30 ಕ್ಕೆ ಕಾರ್ಕಳ ಮಾರಿಗುಡಿಯಲ್ಲಿ ಮಾರಿಗುಡಿ ಯಕ್ಷಗಾನ ಸಂಘದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮ, 9.45 ಕ್ಕೆ ಕಾರ್ಕಳ ಸ್ವರಾಜ್ ಮೈದಾನದಲ್ಲಿ ಕಾರ್ಕಳ ಉತ್ಸವ ಪೂರ್ವಭಾವಿ ಸಭೆ, ಮಧ್ಯಾಹ್ನ 3.30 ಕ್ಕೆ ಕಾರ್ಕಳ ರಾಮಸಮುದ್ರ ಬಳಿ ಸ್ವಚ್ಛ ಬ್ರಿಗೇಡ್ ಕಾರ್ಕಳ ಇವರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ, ಸಂಜೆ 5 ಕ್ಕೆ ಕುಂದಾಪುರದಲ್ಲಿ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ-ಹುಟ್ಟೂರು ಸನ್ಮಾನ ಕಾರ್ಯಕ್ರಮ, ರಾತ್ರಿ 8.30 ಕ್ಕೆ ತೆಂಕನಿಡಿಯೂರು ಕಾಲೇಜು ಮೈದಾನದಲ್ಲಿ ತೆಂಕನಿಡಿಯೂರು ಸ್ಪೋಟ್ಸ್ ಕ್ಲಬ್ (ರಿ) ಉಡುಪಿ ಇವರ ಪ್ರೋ ಕಬ್ಬಡಿ ಪಂದ್ಯಾಟ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಕಾರ್ಕಳದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಫೆ.28 ರಂದು ಬೆಳಗ್ಗೆ 9 ಕ್ಕೆ ಕಾರ್ಕಳದಲ್ಲಿ ಪದವಿ ಪೂರ್ವ ಕಾಲೇಜು ಕಟ್ಟಡ ಉದ್ಘಾಟನೆ, 10 ಕ್ಕೆ ಬೈಲೂರು ಡಿ.ಸಿ.ಸಿ ಬ್ಯಾಂಕ್ ಸ್ಥಳಾಂತರಿತ ನೂತನ ಕಚೇರಿ ಉದ್ಘಾಟನೆ, 11 ಕ್ಕೆ ನಗರದ ಕುಂಜಿಬೆಟ್ಟು ನಲ್ಲಿ ಉಡುಪಿ ಕೆ.ಪಿ.ಟಿ.ಸಿ.ಎಲ್ ನೌಕರರ ಸಮಾವೇಶ ಹಾಗೂ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮ, ಸಂಜೆ 7 ಕ್ಕೆ ನಗರದ ಎಂ.ಜಿ.ಎಂ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಸಾಧನೆ ಕುರಿತ ನಾಟಕ ರಂಗ ರೂಪಕ ಕಾರ್ಯಕ್ರಮಕ್ಕೆ ಭೇಟಿ ನೀಡಿ, ನಂತರ ಸಾಗರಕ್ಕೆ ತೆರಳಲಿರುವರು.