ಉಡುಪಿ: ಕರಾವಳಿ ಯೂತ್ ಕ್ಲಬ್ ತಂಡದಿಂದ ಫೆಬ್ರವರಿ 14ರ ದಿನವನ್ನು ದೇಶ ಪ್ರೇಮಿಗಳ ದಿನಾಚರಣೆಯನ್ನಾಗಿ ವಿಶೇಷವಾಗಿ ಆಚರಿಸಲಾಯಿತು.
ಉಡುಪಿಯ ಅಜ್ಜರಕಾಡಿನಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ ಫುಲ್ವಾಮಾ ದಾಳಿಯಲ್ಲಿ ಮೃತಪಟ್ಟ ವೀರ ಹುತಾತ್ಮ ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವುದರ ಮೂಲಕ ಹಾಗೂ ದೇಶಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರುವ ನಿವೃತ್ತ ಸೈನಿಕರಾದ ಸಂಜಯ್ ಗುಡುಪ್ಕರ್ ಮತ್ತು ಪ್ರಕಾಶ್ ಇಂಗಲ್ಗೆ ಇವರಿಗೆ ಹೂಗುಚ್ಛ ನೀಡಿ ಗೌರವ ವಂದನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರಾವಳಿ ಯೂತ್ ಕ್ಲಬ್ ನ ಸದಸ್ಯರು ಉಪಸಿದ್ಧರಿದ್ದರು.